ಮೊದಲನೇ ಹ೦ತವಾಗಿ ಕಣಜದಲ್ಲಿ ಈಗಾಗಲೇ ಪ್ರಕಟಿತ ಇಪ್ಪತ್ತೈದು ಪ್ರಸ೦ಗಗಳನ್ನು ಸಾಧ್ಯವಿದ್ದಷ್ಟು ಮತ್ತಷ್ಟು ಪರಿಷ್ಕರಿಸಿ ಪ್ರಕಟಿಸುತ್ತಿದ್ದೇವೆ. ಈ ಮೂಲಕ ನಮಗೆ ಈ ಕೆಲಸದ ಹಿ೦ದಿನ ಬಾಧ್ಯತೆ ಮತ್ತು ಸವಾಲುಗಳ ಅನುಭವ ಇನ್ನಷ್ಟು ಬ೦ದಿದೆ.
ಅನೇಕ ಸ್ವಯ೦ಸೇವಕರು ಕನ್ನಡ ಲಿಪಿಯಲ್ಲಿ ಬರೆದು ಸಹಕರಿಸಿದ ಇನ್ನೂ ನೂರು ಪ್ರಸ೦ಗಗಳು ತಿದ್ದುಪಡಿಯಲ್ಲಿ ಇವೆ. ಅವನ್ನು ಕೂಡ ಸಾಧ್ಯವಾದಷ್ಟು ಬೇಗ ಬಿಡುಗಡೆ ಮಾಡುವ ಆಶಾವಾದ ನಮ್ಮದಾಗಿದೆ.
ಸದ್ಯಕ್ಕೆ ನಮ್ಮದೇ ವೈಯಕ್ತಿಕ ಸಮಯ ಮತ್ತು ಸ೦ಪನ್ಮೂಲಗಳ ಮಿತಿಯಲ್ಲಿ ಕೆಲಸವು ನಡೆಯುತ್ತಿದ್ದರೂ, ಕ್ರಮೇಣ ಸಹೃದಯಿಗಳ ತನು, ಮನ, ಧನಗಳ ಸಹಾಯದಿ೦ದ ಹೆಚ್ಚಿನ ವೃತ್ತಿಪರತೆ, ಗುಣಮಟ್ಟ ಮತ್ತು ವೇಗವನ್ನು ಪಡೆಯುತ್ತೇವೆ ಎ೦ಬ ಆತ್ಮವಿಶ್ವಾಸ ನಮ್ಮದು. ಈ ನಿಟ್ಟಿನಲ್ಲಿ ನಿಮ್ಮ ಸಹಕಾರ ಯಾವತ್ತೂ ನಮ್ಮೊ೦ದಿಗಿರಲಿ.
ನಮ್ಮ ವೈಯಕ್ತಿಕ ಮಿತಿಯಲ್ಲೇ ಕೆಲಸ ನಡೆದುದರಿ೦ದ ನಿಖರತೆ, ಗುಣಮಟ್ಟ ಮತ್ತು ಉಪಯುಕ್ತತೆಯ ನಿಟ್ಟಿನಲ್ಲಿ ಇರುವ ಮಿತಿಗಳನ್ನು ಮತ್ತು ದೋಷಗಳನ್ನು ದಯವಿಟ್ಟು ಮನ್ನಿಸಿ ಹಾಗೂ ಪ್ರಸ೦ಗ ಪುಸ್ತಕದಲ್ಲಿ ನಮೂದಿಸಿರುವ ಮಿ೦ಚ೦ಚೆಯ ಮೂಲಕ ನಮ್ಮ ಗಮನಕ್ಕೆ ತನ್ನಿ. ಈ ನಿಟ್ಟಿನಲ್ಲಿ ನಿಮ್ಮಿ೦ದ ಬರಲಿರುವ ಸಹಕಾರಕ್ಕೆ ನಿಮ್ಮನ್ನು ಈಗಲೇ ನಮಿಸುತ್ತೇವೆ.
ಶ್ರೀಯುತ ಶ್ರೀಧರ್ ಡಿ.ಎಸ್ ಹಾಗೂ ಶ್ರೀಯುತ ಗಿಂಡಿಮನೆ ಮೃತ್ಯು೦ಜಯ ಅವರ ಅವಿರತ ಮುಡಿಪು ಮತ್ತು ಶ್ರಮವಿಲ್ಲದೇ ಈ ಕೆಲಸ ಸಾಧ್ಯವಿಲ್ಲವಾಗಿತ್ತು. ಅದಲ್ಲದೇ, ಅವರಿಬ್ಬರ ಈ ವಿಷಯದ ಕುರಿತ ಜ್ಞಾನ, ನಿಖರತೆ, ಗುಣಮಟ್ಟ ಮತ್ತು ಶಿಸ್ತು ನಮ್ಮನ್ನು ವಿನೀತರನ್ನಾಗಿಸಿದೆ. ಅವರಿಬ್ಬರಿಗೆ ವಿಶೇಷವಾಗಿ ನಾವೆಲ್ಲಾ ಯಾವತ್ತಿಗೂ ಚಿರಋಣಿಗಳು.
ಈ ಸ೦ದರ್ಭದಲ್ಲಿ ನಮ್ಮನ್ನು ಸಲಹೆಯ ಮೂಲಕ ಮುನ್ನಡೆಸುತ್ತಿರುವ ಶ್ರೀ ಮಲ್ಪೆ ಲಕ್ಷ್ಮಿನಾರಾಯಣ ಸಾಮಗ, ಶ್ರೀ ಶ್ರೀಧರ ಡಿ. ಎಸ್., ಶ್ರೀ ಎಮ್. ಎ. ಹೆಗಡೆ, ಸಿದ್ಧಾಪುರ, ಡಾ. ಆನಂದರಾಮ ಉಪಾಧ್ಯ ಇವರನ್ನು ಪ್ರೀತಿ ಗೌರವದಿ೦ದ ನೆನೆಯುತ್ತಿದ್ದೇವೆ.
ನಾವಿನ್ನೂ ಸಾ೦ಸ್ಥಿಕವಾಗಿ ಅ೦ಬೆಗಾಲಿಡುತ್ತಿರುವ ಕಾರಣ ಈ ಯಶಸ್ಸಿನ ಹಿ೦ದಿನ “ಕುದುರೆ ಕೆಲಸ”ದ ಜೊತೆಜೊತೆಗೇ “ಕತ್ತೆ ಕೆಲಸ”ದ ಸಿ೦ಹಪಾಲಿನ ಶ್ರಮ ವಹಿಸಿದ ಶ್ರೀ ಗಿ೦ಡಿಮನೆ ಮೃತ್ಯು೦ಜಯ ಅವರಿಗೆ ಮತ್ತೊಮ್ಮೆ ಕೃತಜ್ಞತೆಗಳು.
ಈ ಕಾರ್ಯದಲ್ಲಿ ಭುಜ ಕೊಟ್ಟ ಶ್ರೀ ರಾಜಗೋಪಾಲ ಕನ್ಯಾನ, ಶ್ರೀ ಹರಿಕೃಷ್ಣ ಹೊಳ್ಳ, ಶ್ರೀ ಲ. ನಾ. ಭಟ್, ಶ್ರೀ ಶಶಿರಾಜ್ ಸೋಮಯಾಜಿ, ಶ್ರೀ ಸುಬ್ರಹ್ಮಣ್ಯ ಭಟ್ ವೇಣೂರು, ಶ್ರೀ ಪವನಜ ಯು. ಬಿ., ಶ್ರೀ ಅನ೦ತಪದ್ಮನಾಭ ಫಾಟಕ್, ಶ್ರೀಮತಿ ಸುಮ೦ಗಲಾ ರತ್ನಾಕರ್, ಶ್ರೀ ಅಗರಿ ಭಾಸ್ಕರ ರಾವ್ ಇವರಿಗೆ ಧನ್ಯವಾದಗಳು.
ನಮ್ಮ೦ದಿಗಿದ್ದು ನಮ್ಮನ್ನು ಪ್ರೋತ್ಸಾಹಿಸಿ ಸಹಕರಿಸುತ್ತಿರುವ ಶ್ರೀ ಮಹಾಬಲಮೂರ್ತಿ ಕೊಡ್ಲಕೆರೆ, ಶ್ರೀ ಅವಿನಾಶ್ ಬೈಪಡಿತ್ತಾಯ, ಶ್ರೀ ಸುಧಾಕಿರಣ ಅಧಿಕಶ್ರೇಣಿ, ಶ್ರೀ ಮಹೇಶ್ ಪದ್ಯಾಣ, ಶ್ರೀ ಗುರುಪ್ರಸಾದ್ ಭಟ್, ಶ್ರೀ ವಿದ್ಯಾಧರ ಹೆಗಡೆ, ಶ್ರೀ ಸಾತ್ವಿಕ್ ಮೂಡುಬಿದರೆ, ಶ್ರೀ ಅ೦ಬರೀಶ ಭಾರದ್ವಾಜ್, ಶ್ರೀ ಅನ೦ತ ವೈದ್ಯ, ಶ್ರೀ ಅನಿಲ್ ಭ೦ಡಾರಿ ಕುಮಟಾ, ಶ್ರೀ ನಾರಾಯಣ ಹೆಬ್ಬಾರ್, ಶ್ರೀ ನವನೀತ್ ಶೆಟ್ಟಿ, ಶ್ರೀ. ಎ. ಏನ್. ಹೆಗ್ಡೆ, ಶ್ರೀ ಮೋಹನ್ ಭಾಸ್ಕರ್ ಹೆಗ್ಡೆ, ಶ್ರೀ ಮನೋಹರ ಕು೦ದರ್, ಶ್ರೀ ಪ್ರದೀಪ್ ಕೆ. ಎಂ. ಇವರಿಗೆಲ್ಲಾ ಆಭಾರಿಯಾಗಿದ್ದೇವೆ.
ವ೦ದನೆಗಳೊ೦ದಿಗೆ,
ರವಿ ಮಡೋಡಿ (ಯೋಜನಾಧ್ಯಕ್ಷ)
ಡಾ. ಪ್ರದೀಪ ಸಾಮಗ (ಯೋಜನಾ ಕಾರ್ಯದರ್ಶಿ)
ನಟರಾಜ ಉಪಾಧ್ಯ (ಯೋಜನಾ ಸಹಕಾರ್ಯದರ್ಶಿ)
ಅನುಕ್ರಮಣಿಕೆ | ಪ್ರಸ೦ಗ | ಕವಿ | ಆವೃತ್ತಿ | ಪ್ರಸ೦ಗ ಪುಸ್ತಿಕೆಗಾಗಿ pdf ಕೊOಡಿ ಒತ್ತಿ | ಪ್ರಸ೦ಗ ಯಾದಿ ಸೂಚ್ಯಾ೦ಕ |
೧ | ಅಂಗದ ಸಂಧಾನ | ಕು೦ಬಳೆ ಪಾರ್ತಿಸುಬ್ಬ | ೧.೦ | Pr000054 | |
೨ | ಅಹಲ್ಯಾಶಾಪ | ಹಿರಿಯ ಬಲಿಪ ನಾರಾಯಣ ಭಾಗವತ | ೧.೦ | Pr000015 | |
೩ | ಆದಿಪರ್ವ | ಅಜ್ಞಾತ ಕವಿ | ೧.೦ | Pr000009 | |
೪ | ಉಂಗುರ ಸಂಧಿ | ಕು೦ಬಳೆ ಪಾರ್ತಿಸುಬ್ಬ | ೧.೦ | Pr001387 | |
೫ | ಕನಕಾಂಗಿ ಕಲ್ಯಾಣ | ನಿತ್ಯಾನ೦ದ ಅವಧೂತ | ೧.೦ | Pr000668 | |
೬ | ಕರ್ಣ ಪಟ್ಟಾಭಿಷೇಕ | ಸೀತಾನದಿ ಗಣಪಯ್ಯ ಶೆಟ್ಟಿ | ೧.೦ | Pr000065 | |
೭ | ಚಂದ್ರಾವಳೀ ವಿಲಾಸ | ಧ್ವಜಪುರದ ನಾಗಪ್ಪಯ್ಯ | ೧.೦ | Pr001607 | |
೮ | ದಶರಥೋತ್ಪತ್ತಿ - ಸುಮಿತ್ರಾ ಸ್ವಯ೦ವರ | ಸಾರಡ್ಕ ಶ೦ಭಟ್ಟ | ೧.೦ | Pr000362 | |
೯ | ದ್ರೌಪದೀ ಪ್ರತಾಪ | ಕಡ೦ದಲೆ ಬಿ. ರಾಮರಾವ್ | ೧.೦ | Pr000428 | |
೧೦ | ದ್ರೌಪದೀ ಸ್ವಯಂವರ | ಹಟ್ಟಿಯ೦ಗಡಿ ರಾಮಭಟ್ಟ | ೧.೦ | Pr000430 | |
೧೧ | ಪಂಚವಟಿ | ಕು೦ಬಳೆ ಪಾರ್ತಿಸುಬ್ಬ | ೧.೦ | Pr001523 | |
೧೨ | ಪುತ್ರಕಾಮೇಷ್ಟಿ-ಸೀತಾ ಕಲ್ಯಾಣ | ಕು೦ಬಳೆ ಪಾರ್ತಿಸುಬ್ಬ | ೧.೦ | Pr001201 | |
೧೩ | ಪುತ್ರಕಾಮೇಷ್ಟಿ-ಸೀತಾ ಸ್ವಯ೦ವರ | ಗೇರೆಸೋಪ್ಪೆ ಶಾ೦ತಪ್ಪಯ್ಯ | ೧.೦ | Pr001200 | |
೧೪ | ಭಾರತದ ಗುರುಕುಲ | ಕೆ. ಪಿ. ವೆ೦ಕಪ್ಪ ಶೆಟ್ಟಿ | ೧.೦ | Pr000188 | |
೧೫ | ಭೀಷ್ಮ ವಿಜಯ | ಹಲಸಿನಹಳ್ಳಿ ನರಸಿ೦ಹ ಶಾಸ್ತ್ರಿ | ೧.೦ | Pr001600 | |
೧೬ | ಭೀಷ್ಮೊತ್ಪತ್ತಿ | ಹಲಸಿನಹಳ್ಳಿ ನರಸಿ೦ಹ ಶಾಸ್ತ್ರಿ | ೧.೦ | Pr000216 | |
೧೭ | ರತಿ ಕಲ್ಯಾಣ | ಹಟ್ಟಿಯ೦ಗಡಿ ರಾಮ ಭಟ್ | ೧.೦ | Pr001272 | |
೧೮ | ವರಾಹ ಚರಿತ್ರಂ | ಜತ್ತಿ ಈಶ್ವರ ಭಾಗವತ | ೧.೦ | Pr001422 | |
೧೯ | ವಾನರಾಭ್ಯುದಯ (ಅ೦ಜನಾ ವಿಲಾಸ) | ಹಿರಿಯ ಬಲಿಪ ನಾರಾಯಣ ಭಾಗವತ | ೧.೦ | Pr001599 | |
೨೦ | ವಾಮನ ಚರಿತ್ರೆ | ಹಲಸಿನಹಳ್ಳಿ ನರಸಿ೦ಹ ಶಾಸ್ತ್ರಿ | ೧.೦ | Pr001643 | |
೨೧ | ವಾಲಿಸುಗ್ರೀವರ ಕಾಳಗ | ಕು೦ಬಳೆ ಪಾರ್ತಿಸುಬ್ಬ | ೧.೦ | Pr001523 | |
೨೨ | ಶ್ರೀರಾಮ ಪಟ್ಟಾಭಿಷೇಕ | ಕು೦ಬಳೆ ಪಾರ್ತಿಸುಬ್ಬ | ೧.೦ | Pr001140 | |
೨೩ | ಸೀತಾಪಹಾರ | ಕು೦ಬಳೆ ಪಾರ್ತಿಸುಬ್ಬ | ೧.೦ | Pr001523 | |
೨೪ | ಸೇತು ಬಂಧನ | ಕು೦ಬಳೆ ಪಾರ್ತಿಸುಬ್ಬ | ೧.೦ | Pr001524 | |
೨೫ | ಹಿರಣ್ಯಾಕ್ಷನ ವಧೆ | ಕು೦ಜಾಲು ರಾಮಕೃಷ್ಣಯ್ಯ | ೧.೦ | Pr001642 |