Saturday, January 25, 2020

ಯಕ್ಷವಾಹಿನಿ ಸಂಸ್ಥೆ ಪ್ರಸ್ತುತ ಪಡಿಸುತ್ತಿರುವ ಯಕ್ಷಪ್ರಸಂಗಕೋಶ ಯೋಜನೆ – ಹನ್ನೆರಡನೇ ಮೈಲಿಗಲ್ಲಿನಲ್ಲಿ ೧೪ ಪ್ರಸಂಗಗಳ ಅಂತರಜಾಲ ಪ್ರತಿಗಳ ಲೋಕಾರ್ಪಣೆ!






ಯಕ್ಷಪ್ರಸಂಗಕೋಶ ಯೋಜನೆಯ ೧೨ನೇ ಹಂತದಲ್ಲಿ ೧೪ ಪ್ರಸಂಗಗಳು ಅಂತರಜಾಲ ಪ್ರತಿಗಳಾಗಿ ಲೋಕಾರ್ಪಣೆಯಾಗುತ್ತಿವೆ.  ಈ ಮೂಲಕ ಈವರೆಗೆ ಒಟ್ಟು ೧೭೫ ಪ್ರಸಂಗಗಳು ಲೋಕಾರ್ಪಣೆಯಾಗಿವೆ.



(ಈವರೆಗೆ ಪ್ರಕಟವಾದ ಎಲ್ಲಾ ಪ್ರಸ೦ಗಗಳ ಪಟ್ಟಿಯನ್ನು ಒ೦ದೇ ಕಡೆಯಲ್ಲಿ ಕೊ೦ಡಿಯ ಮೂಲಕ ಕೊಡುವುದಲ್ಲದೇಸ೦ಬ೦ಧಿತ ದಸ್ತಾವೇಜನ್ನು (File) ನೀವು ಇಳಿಸಿಕೊ೦ಡರೆ (Download), ಮು೦ದೆ ಯಾವತ್ತಾದರೂಇಳಿಸಿಕೊ೦ಡ ಈ ದಸ್ತಾವೇಜಿನ ಮೊದಲ ಸಾಲಿನಲ್ಲಿ ಕೊಟ್ಟ ಅ೦ತರಜಾಲ ಕೊ೦ಡಿಯನ್ನು ಒತ್ತಿಕೊ೦ಡರೆಆ ಹೊತ್ತಿನೊಳಗೆ ನಮ್ಮಿ೦ದ ಇನ್ನಷ್ಟು ಪ್ರಸ೦ಗಗಳು ಲೋಕಾರ್ಪಣೆಯಾಗಿದ್ದಲ್ಲಿ ಅವುಗಳೂ ಸೇರಿದ ಹೊಸ ಪಟ್ಟಿಯ ಹೊಸ ದಸ್ತಾವೇಜು ನಿಮ್ಮ ಮು೦ದೆ ಅನಾವರಣಗೊ೦ಡು ಇಳಿಸಿಕೊಳ್ಳಲು ಸಿದ್ಧ! ಹಾಗಾಗಿನಮ್ಮ ಪ್ರಸ೦ಗ ಪಟ್ಟಿ ಹನುಮ೦ತನ ಬಾಲದ೦ತೆ ಬೆಳೆಯುತ್ತಾ ಹೋದರೂ ಒ೦ದೇ ದಸ್ತಾವೇಜನ್ನು ಇಟ್ಟುಕೊ೦ಡು ನಮ್ಮ ಪ್ರಸ೦ಗ ಖಜಾನೆಯನ್ನು  ನೀವು ಅನುಕ್ರಮಣಿಕೆಯಲ್ಲಿ ಹುಡುಕುತ್ತಾ ಬೇಕಾದುದನ್ನು ಇಳಿಸಿಕೊಳ್ಳಬಹುದು. ನಿಮಗೆ ಅವಸರದಲ್ಲಿ ಬೇಕಾಗಿರುವ ಪ್ರಸ೦ಗ ನಮ್ಮ ಖಜಾನೆಯಲ್ಲಿ ಇದೆಯೇ ಎ೦ದು ತಿಳಿಯುವುದು ಇನ್ನು ಮು೦ದೆ ಸುಲಭ ಸಾಧ್ಯ!)

ಈ ಬಾರಿ ಪ್ರಕಟವಾದ ೧೪ ಪ್ರಸಂಗಗಳ ಪಟ್ಟಿ:
ಗಾಂಧಾರಿ
ಅನಂತರಾಮ ಬಂಗಾಡಿ

ಭೀಷ್ಮಾರ್ಜುನರ ಕಾಳಗ
ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ


ಕರ್ಣಾರ್ಜುನ ಕಾಳಗ
ಪಾಂಡೇಶ್ವರ ವೆಂಕಟ

ಕುಂಭಕರ್ಣಾದಿ ಕಾಳಗ
ಪಾರ್ತಿಸುಬ್ಬ


ಗಜೇಂದ್ರ ಮೋಕ್ಷ
ಕಿರಿಯ ಬಲಿಪ ನಾರಾಯಣ ಭಾಗವತ

ಗರುಡ ಗರ್ವಭಂಗ
ಹಿರಿಯ ಬಲಿಪ ನಾರಾಯಣ ಭಾಗವತ


ವೀರವರ್ಮ ಕಾಳಗ
ಹಿರಿಯ ಬಲಿಪ ನಾರಾಯಣ ಭಾಗವತ


ಶ್ರೀ ದೇವಿ ಬನಶಂಕರಿ
ಕಂದಾವರ ರಘುರಾಮ ಶೆಟ್ಟಿ


ಆದಿಕವಿ ವಾಲ್ಮೀಕಿ
ಅಮೃತ ಸೋಮೇಶ್ವರ


೧೦ ಶ್ರೀ ಮೂಕಾಂಬಿಕಾ ಮಹಾತ್ಮೆ (ಕೌಂಹಾಸುರ ವಧೆ)
ಬಿ. ಬಾಬು ಕುಡ್ತಡ್ಕ


೧೧ ಕುಂತೀ ಸ್ವಯಂವರ
ಸೀತಾನದಿ ಗಣಪಯ್ಯ ಶೆಟ್ಟಿ

೧೨ ನಿಮಿಯಜ್ಞ
ರಾಧಾಕೃಷ್ಣ ಕಲ್ಚಾರ್‌


೧೩ ಮೈರಾವಣ ಕಾಳಗ
ಅಜಪುರದ ವಂಕಟ

೧೪ ಶಲ್ಯ ಭೇದನ
ರಾಧಾಕೃಷ್ಣ ಕಲ್ಚಾರ್‌


ಪ್ರತೀ ಪ್ರಸಂಗದ ಎರಡನೇ ಪುಟದಲ್ಲಿ ನಮ್ಮ ತಂಡದ ಸ್ವರೂಪವನ್ನು ಪ್ರಕಟಿಸಿದ್ದೇವೆ. ಈ ಪ್ರಕಟಣೆಯ ಕೊನೆಯಲ್ಲೂ ಇದನ್ನು ಸೇರಿಸಿದ್ದೇವೆ. 
 
ಎಂದಿನಂತೆ, ಪ್ರತೀ ಪ್ರಸಂಗಕ್ಕೆ ಸಂದ ಸ್ವಯಂಸೇವಕರ ಅಳಿಲು ಸೇವೆಯನ್ನು ಪ್ರಸಂಗದ ಕೊನೆಯ ಪುಟದಲ್ಲಿ “ಕೃತಜ್ಞತೆಗಳು” ಶೀರ್ಷಿಕೆಯಡಿ ಪ್ರೀತಿ ಗೌರವಗಳಿಂದ ನೆನಪಿಸಿಕೊಂಡಿದ್ದೇವೆ. 


ವಂದನೆಗಳೊ೦ದಿಗೆ,

ರವಿ ಮಡೋಡಿ
ಯಕ್ಷಪ್ರಸಂಗಯೋಜನೆ ಸಮೂಹ ಹಾಗೂ ಯಕ್ಷವಾಹಿನಿ ಸಂಸ್ಥೆ/ಸಮೂಹಗಳ ಪರವಾಗಿ




ಯಕ್ಷವಾಹಿನಿ ಸಂಸ್ಥೆ ಪ್ರಸ್ತುತ ಪಡಿಸುತ್ತಿರುವ ಯಕ್ಷಪ್ರಸಂಗಕೋಶ ಯೋಜನೆ – ಹನ್ನೆರಡನೇ ಮೈಲಿಗಲ್ಲಿನಲ್ಲಿ ೧೪ ಪ್ರಸಂಗಗಳ ಅಂತರಜಾಲ ಪ್ರತಿಗಳ ಲೋಕಾರ್ಪಣೆ!

ಯಕ್ಷವಾಹಿನಿ ಸಂಸ್ಥೆ ಪ್ರಸ್ತುತ ಪಡಿಸುತ್ತಿರುವ ಯಕ್ಷಪ್ರಸಂಗಕೋಶ ಯೋಜನೆ – ಹನ್ನೆರಡನೇ ಮೈಲಿಗಲ್ಲಿನಲ್ಲಿ ೧೪ ಪ್ರಸಂಗಗಳ ಅಂತರಜಾಲ ಪ್ರತಿಗಳ ಲೋಕಾರ್ಪಣೆ!



ಯಕ್ಷಪ್ರಸಂಗಕೋಶ ಯೋಜನೆಯ ೧೨ನೇ ಹಂತದಲ್ಲಿ ೧೪ ಪ್ರಸಂಗಗಳು ಅಂತರಜಾಲ ಪ್ರತಿಗಳಾಗಿ ಲೋಕಾರ್ಪಣೆಯಾಗುತ್ತಿವೆ.  ಈ ಮೂಲಕ ಈವರೆಗೆ ಒಟ್ಟು ೧೭೫ ಪ್ರಸಂಗಗಳು ಲೋಕಾರ್ಪಣೆಯಾಗಿವೆ.


(ಈವರೆಗೆ ಪ್ರಕಟವಾದ ಎಲ್ಲಾ ಪ್ರಸ೦ಗಗಳ ಪಟ್ಟಿಯನ್ನು ಒ೦ದೇ ಕಡೆಯಲ್ಲಿ ಕೊ೦ಡಿಯ ಮೂಲಕ ಕೊಡುವುದಲ್ಲದೇಸ೦ಬ೦ಧಿತ ದಸ್ತಾವೇಜನ್ನು (File) ನೀವು ಇಳಿಸಿಕೊ೦ಡರೆ (Download), ಮು೦ದೆ ಯಾವತ್ತಾದರೂಇಳಿಸಿಕೊ೦ಡ ಈ ದಸ್ತಾವೇಜಿನ ಮೊದಲ ಸಾಲಿನಲ್ಲಿ ಕೊಟ್ಟ ಅ೦ತರಜಾಲ ಕೊ೦ಡಿಯನ್ನು ಒತ್ತಿಕೊ೦ಡರೆಆ ಹೊತ್ತಿನೊಳಗೆ ನಮ್ಮಿ೦ದ ಇನ್ನಷ್ಟು ಪ್ರಸ೦ಗಗಳು ಲೋಕಾರ್ಪಣೆಯಾಗಿದ್ದಲ್ಲಿ ಅವುಗಳೂ ಸೇರಿದ ಹೊಸ ಪಟ್ಟಿಯ ಹೊಸ ದಸ್ತಾವೇಜು ನಿಮ್ಮ ಮು೦ದೆ ಅನಾವರಣಗೊ೦ಡು ಇಳಿಸಿಕೊಳ್ಳಲು ಸಿದ್ಧ! ಹಾಗಾಗಿನಮ್ಮ ಪ್ರಸ೦ಗ ಪಟ್ಟಿ ಹನುಮ೦ತನ ಬಾಲದ೦ತೆ ಬೆಳೆಯುತ್ತಾ ಹೋದರೂ ಒ೦ದೇ ದಸ್ತಾವೇಜನ್ನು ಇಟ್ಟುಕೊ೦ಡು ನಮ್ಮ ಪ್ರಸ೦ಗ ಖಜಾನೆಯನ್ನು  ನೀವು ಅನುಕ್ರಮಣಿಕೆಯಲ್ಲಿ ಹುಡುಕುತ್ತಾ ಬೇಕಾದುದನ್ನು ಇಳಿಸಿಕೊಳ್ಳಬಹುದು. ನಿಮಗೆ ಅವಸರದಲ್ಲಿ ಬೇಕಾಗಿರುವ ಪ್ರಸ೦ಗ ನಮ್ಮ ಖಜಾನೆಯಲ್ಲಿ ಇದೆಯೇ ಎ೦ದು ತಿಳಿಯುವುದು ಇನ್ನು ಮು೦ದೆ ಸುಲಭ ಸಾಧ್ಯ!)

ಈ ಬಾರಿ ಪ್ರಕಟವಾದ ೧೪ ಪ್ರಸಂಗಗಳ ಪಟ್ಟಿ:

ಗಾಂಧಾರಿ

ಅನಂತರಾಮ ಬಂಗಾಡಿ


ಭೀಷ್ಮಾರ್ಜುನರ ಕಾಳಗ
ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ


ಕರ್ಣಾರ್ಜುನ ಕಾಳಗ
ಪಾಂಡೇಶ್ವರ ವೆಂಕಟ

ಕುಂಭಕರ್ಣಾದಿ ಕಾಳಗ
ಪಾರ್ತಿಸುಬ್ಬ


ಗಜೇಂದ್ರ ಮೋಕ್ಷ
ಕಿರಿಯ ಬಲಿಪ ನಾರಾಯಣ ಭಾಗವತ

ಗರುಡ ಗರ್ವಭಂಗ
ಹಿರಿಯ ಬಲಿಪ ನಾರಾಯಣ ಭಾಗವತ


ವೀರವರ್ಮ ಕಾಳಗ
ಹಿರಿಯ ಬಲಿಪ ನಾರಾಯಣ ಭಾಗವತ


ಶ್ರೀ ದೇವಿ ಬನಶಂಕರಿ
ಕಂದಾವರ ರಘುರಾಮ ಶೆಟ್ಟಿ


ಆದಿಕವಿ ವಾಲ್ಮೀಕಿ
ಅಮೃತ ಸೋಮೇಶ್ವರ


೧೦ ಶ್ರೀ ಮೂಕಾಂಬಿಕಾ ಮಹಾತ್ಮೆ (ಕೌಂಹಾಸುರ ವಧೆ)
ಬಿ. ಬಾಬು ಕುಡ್ತಡ್ಕ


೧೧ ಕುಂತೀ ಸ್ವಯಂವರ
ಸೀತಾನದಿ ಗಣಪಯ್ಯ ಶೆಟ್ಟಿ

೧೨ ನಿಮಿಯಜ್ಞ
ರಾಧಾಕೃಷ್ಣ ಕಲ್ಚಾರ್‌


೧೩ ಮೈರಾವಣ ಕಾಳಗ
ಅಜಪುರದ ವಂಕಟ

೧೪ ಶಲ್ಯ ಭೇದನ
ರಾಧಾಕೃಷ್ಣ ಕಲ್ಚಾರ್‌


ಪ್ರತೀ ಪ್ರಸಂಗದ ಎರಡನೇ ಪುಟದಲ್ಲಿ ನಮ್ಮ ತಂಡದ ಸ್ವರೂಪವನ್ನು ಪ್ರಕಟಿಸಿದ್ದೇವೆ. ಈ ಪ್ರಕಟಣೆಯ ಕೊನೆಯಲ್ಲೂ ಇದನ್ನು ಸೇರಿಸಿದ್ದೇವೆ. 
ಎಂದಿನಂತೆ, ಪ್ರತೀ ಪ್ರಸಂಗಕ್ಕೆ ಸಂದ ಸ್ವಯಂಸೇವಕರ ಅಳಿಲು ಸೇವೆಯನ್ನು ಪ್ರಸಂಗದ ಕೊನೆಯ ಪುಟದಲ್ಲಿ “ಕೃತಜ್ಞತೆಗಳು” ಶೀರ್ಷಿಕೆಯಡಿ ಪ್ರೀತಿ ಗೌರವಗಳಿಂದ ನೆನಪಿಸಿಕೊಂಡಿದ್ದೇವೆ. 


ವಂದನೆಗಳೊ೦ದಿಗೆ,

ರವಿ ಮಡೋಡಿ
ಯಕ್ಷಪ್ರಸಂಗಯೋಜನೆ ಸಮೂಹ ಹಾಗೂ ಯಕ್ಷವಾಹಿನಿ ಸಂಸ್ಥೆ/ಸಮೂಹಗಳ ಪರವಾಗಿ




Sunday, January 19, 2020

ಶ್ರೀ ಅಶೋಕ್‌ ವಿ. ಶೆಟ್ಟಿ, ಕೊಡ್ಲಾಡಿ ಅವರ ಪ್ರಾಯೋಜಕತ್ವದಲ್ಲಿ ಎರಡು ಪ್ರಸಂಗಗಳ ಮರು-ಬಿಡುಗಡೆ






ಶ್ರೀ ಅಶೋಕ್ವಿ. ಶೆಟ್ಟಿ, ಕೊಡ್ಲಾಡಿ ಅವರ ಪ್ರಾಯೋಜಕತ್ವವನ್ನು ದಾಖಲಿಸುತ್ತಾ ಕೆಳಗಿನ ಎರಡು ಪ್ರಸಂಗಗಳನ್ನು ಮರುಪ್ರಕಟಿಸುತ್ತಿದ್ದೇವೆ. ಮೂಲಕ, ಅಯಾಚಿತವಾಗಿ ನಮ್ಮ ಯಕ್ಷಪ್ರಸಂಗಕೋಶದ ಕೆಲಸವನ್ನು ಮೆಚ್ಚಿ ಪ್ರೋತ್ಸಾಹಿಸಲು ಸಂಸ್ಥೆಗೆ ಈವರೆಗೆ ಎರಡು ಬಾರಿ ಹಣವನ್ನು ದಾನ ಮಾಡಿದ ಅವರನ್ನು ಈ ಮೂಲಕ ಕೃತಜ್ಞತೆಗಳಿಂದ ನೆನೆಯುತ್ತಿದ್ದೇವೆ.


1. ಗದಾಪರ್ವ, ಅಜ್ಞಾತ ಕವಿ

https://drive.google.com/open?id=1yRY9LtYB4ptlUdsruQ5kWZKTJSep1YxV

2. ಭೀಷ್ಮ ವಿಜಯ, ಹಲಸಿನಹಳ್ಳಿ ನರಸಿ೦ಹ ಶಾಸ್ತ್ರಿ
https://drive.google.com/open?id=0ByoSUfOf85mCdEx5UDA0OE1sV0E

ಯಕ್ಷಪ್ರಸಂಗಕೋಶದ ಎಲ್ಲಾ ಪ್ರಸಂಗಗಳಿಗಾಗಿ ಈ ಕೊಂಡಿಯನ್ನು ಒತ್ತಿ ಇಲ್ಲಾ ಅದರ ಕೆಳಗೆ ಕೊಟ್ಟ ಆಂಡ್ರಾಯ್ಡ್‌ ಆಪ್‌ ನ್ನು ನಿಮ್ಮ ಫೋನಿನಲ್ಲಿ ಸೇರಿಸಿಕೊಳ್ಳಿ!

https://drive.google.com/open?id=0ByoSUfOf85mCSXA0Rm1NQTRiY28

ಆಂಡ್ರೋಯ್ಡ್ ಆಪ್ ನ ಕೊಂಡಿ : 

ಯಕ್ಷಪ್ರಸಂಗಕೋಶ ಯೋಜನೆಯ ಸುತ್ತ ಯಕ್ಷವಾಹಿನಿ ಸಂಸ್ಥೆಯು ಪ್ರತಿಷ್ಠಾನವಾಗಿ ಸ್ಥಾಪಿತವಾಯಿತು. ಯೋಜನೆಯು ಹೆಚ್ಚುಕಡಿಮೆ ಸ್ವಯಂಸೇವೆಯ ಬಲದಲ್ಲಿಯೇ ನಡೆಯುತ್ತಿದ್ದರೂ, ಅಂತರಜಾಲದಲ್ಲಿ ಯಕ್ಷಗಾನದ ಕುರಿತಾದ ಅನೇಕ ಯೋಜನೆಗಳನ್ನು ಮುಂದೆ ಕಾರ್ಯಗತಗೊಳಿಸಲು ನಮಗೆ ಸಾಂಘಿಕ ಬಲವೂ ಹಾಗೂ ಹಣದ ಅವಶ್ಯಕತೆಯೂ ಇರುವುದು ನಮಗೆ ಗೊತ್ತಿತ್ತು. ಹಾಗಾಗಿಯೇ ಯೋಜನೆಯ ಕೆಲಸ ಪ್ರಾರಂಭವಾಗುತ್ತಿದ್ದಂತೆಯೇ ಪ್ರತಿಷ್ಠಾನವೊಂದನ್ನು ರಚಿಸಿದೆವು, ಸಾರ್ವಜನಿಕವಾದ ಹಣವು ನಮಗೆ ಮುಂದೆ ಬೇಕಾಗುತ್ತದೆ, ಸಾಂಘಿಕವಾಗಿ ನಾವು ಸಾರ್ವಜನಿಕ ಸಂಸ್ಥೆಯಾಗಿ ಬೆಳೆಯಬೇಕಾಗುತ್ತದೆ ಎಂಬ ತಾತ್ವಿಕ ನೆಲೆ ಇನ್ನೂ ಗಟ್ಟಿಯಾಯಿತು. ಆದರೆ ಸಾರ್ವಜನಿಕವಾದ ಹಣವನ್ನು ಸಂಗ್ರಹಿಸುವುದು ಹಾಗೂ ಅದನ್ನು ಸದುಪಯೋಗಪಡಿಸುವುದು ಕುರಿತಾಗಿ ಇರುವ ಬಾಧ್ಯತೆಗಳ ಅರಿವಿದ್ದೇ, ನಾವು ಸಾಂಘಿಕವಾಗಿ ಬೆಳೆಯುತ್ತಾ ಹೋದಂತೆ ಹಣದ ಕುರಿತಾದ ಸಾಧ್ಯತೆ ಬಾಧ್ಯತೆಗಳನ್ನು ಒಟ್ಟಿಗೇ ಹೆಚ್ಚಿಸುತ್ತಾ ಹೋಗುವುದೆಂದು ನಮ್ಮ ನಿರ್ಣಯವಿತ್ತು. ಹೇಗಿದ್ದರೂ ಎಲ್ಲಾ ಯೋಜನೆಗಳು ಸಧ್ಯಕ್ಕೆ ಸ್ವಯಂಸೇವೆಯ ಬಲದಲ್ಲಿಯೇ ಇಂದಿಗೂ ಮುನ್ನುಗ್ಗುತ್ತಿವೆ.


 ನಡುವೆಯಕ್ಷಪ್ರೇಮಿ ಶ್ರೀ ಅಶೋಕ್ ವಿಶೆಟ್ಟಿಕೊಡ್ಲಾಡಿಯವರು ರವಿ ಮಡೋಡಿಯವರಿಗೆ ಕರೆ ಮಾಡಿಸಂಸ್ಥೆಯ ಏಳಿಗೆಗಾಗಿಅಂತರಜಾಲದಲ್ಲಿ ಯಕ್ಷಗಾನದ ದಾಖಲೀಕರಣದ ಇನ್ನೂ ಹೆಚ್ಚಿನ ಒಳ್ಳೆಯ ಕೆಲಸಗಳು  ನಮ್ಮಿಂದ ನಡೆಯಲಿ ಎಂಬ ಆಶಯದಲ್ಲಿ ರೂಪಾಯಿ ೧೫,೦೦೦ವನ್ನು ಕಳಿಸಿದರು. ಸಂಸ್ಥೆಯನ್ನು ಬೆಳೆಸಲೋಸುಗ ಅಂತರಜಾಲದಲ್ಲಿ ಪ್ರಕಟಿಸುವ ಪ್ರತೀ ಪ್ರಸಂಗವೊಂದಕ್ಕೆ ರೂಪಾಯಿ ೧೦,೦೦೦ದಂತೆ ಪ್ರಾಯೋಜಕತ್ವದ ನೀತಿಯನ್ನು ರೂಪಿಸಿದ್ದೆವು.
ನಡುವೆ, ಪ್ರೊ. ಎಮ್.‌ . ಹೆಗಡೆಯವರ ಯಕ್ಷಗಾನ ಅಕಾಡೆಮಿಯ ಘನ ಆಧ್ಯಕ್ಷತೆ ಹಾಗೂ ಶ್ರೀ ಶಿವರುದ್ರಪ್ಪ ಅವರ ರಿಜಿಷ್ಟ್ರಾರ್ಆಗಿನಿರ್ವಹಣತ್ವ ಜಂಟಿ ನಾಯಕತ್ವದಲ್ಲಿಯಕ್ಷಗಾನ ಪ್ರಸಂಗಗಳ ಡಿಜಿಟಲೀಕರಣಎಂಬಅಕಾಡೆಮಿಯ ಯೋಜನೆಯಲ್ಲಿ ಸಹಭಾಗಿತ್ವಕ್ಕಾಗಿ ನಾವೂ ಅರ್ಜಿ ಸಲ್ಲಿಸಿದೆವು.  ನಾವು, ಅಕಾಡೆಮಿ ಸಹಯೋಗಕ್ಕೆ ಮಾತ್ರ ಸಾರ್ವಜನಿಕ ತೆರಿಗೆ ಹಣ ಎಂಬ ಬಾಧ್ಯತೆಯ ಸುತ್ತ ಸಂವೇದನಾಶೀಲರಾಗಿ ಪೂರ್ವನಿಯೋಜಿತ ಪ್ರಾಯೋಜಕತ್ವದ ಮೊತ್ತಕ್ಕಿಂತ ಶೇಕಡಾ ೫೦ಕ್ಕಿಂತ ಕಡಿಮೆ ಪ್ರೋತ್ಸಾಹಧನವನ್ನು ಸ್ವೀಕರಿಸುವತ್ತ  ಮನಮಾಡಿ ಅಕಾಡೆಮಿ ನಡೆಸಿದ ಸ್ಪರ್ಧಾತ್ಮಕ  ಸಾರ್ವಜನಿಕ ಬಿಡ್ಪ್ರಕ್ರಿಯೆಯಲ್ಲಿ ಗೆದ್ದು ಒಡಂಬಡಿಕೆಯನ್ನು ಮಾಡಿಕೊಂಡು ಸಾಂಸ್ಥಿಕ ಸಹಯೋಗದ ದಾರಿಯಲ್ಲಿ ಮುಂದುವರಿಯುತ್ತಾ ಇದ್ದೇವೆ.
ಇತ್ತ ಸರಕಾರದ ಬಿಡ್ಪ್ರಕ್ರಿಯೆಯಲ್ಲಿ ಭಾಗವಹಿಸುವನಾವು ಸಾವಿರಾರು ರೂಪಾಯಿಗಳ ಗ್ಯಾರಂಟಿಯ ಹಣವನ್ನು ಮೊದಲೇ ಸರಕಾರಕ್ಕೆ ಕೊಟ್ಟು ಸಹಕರಿಸಬೇಕಿತ್ತು. ಕುರಿತಾಗಿ ಶ್ರೀ ಅಶೋಕ್ವಿ. ಶೆಟ್ಟಿ, ಕೊಡ್ಲಾಡಿಯವರು ಮೊದಲೇ ಕೊಟ್ಟ ಹಣವನ್ನು ಸದುಪಯೋಗಪಡಿಸಿಕೊಂಡು ವಿಷಯವನ್ನು ಅವರಿಗೆ ತಿಳಿಸಿದರು. ಅದರಿಂದ ಮತ್ತೆ ಪ್ರೇರಿತರಾಗಿ ಅವರು ಇನ್ನೂ ೧೦,೦೦೦ ರೂಪಾಯಿಗಳನ್ನು ನಮ್ಮ ಸಂಸ್ಥೆಯ ಅಕೌಂಟಿಗೆ ಸೇರಿಸಿದರು, ನೀವು ಸಾಂಸ್ಥಿಕವಾಗಿ ಬೆಳೆಯುತ್ತಾ ಹೋಗಿ ಎಂದು ಇನ್ನೊಮ್ಮೆ ರೀತಿಯಾಗಿ ಶುಭ ಹಾರೈಸಿದರು.
ಈ ರೀತಿಯಾಗಿ ದಾನಿಗಳಿಗೆ ಪ್ರಕಟಿಸಿದ ಪ್ರಸಂಗಗಳ ಪ್ರಾಯೋಜಕತ್ವವನ್ನು ಅಂಟಿಸಿ ನಮ್ಮ ಬಾಧ್ಯತೆಯನ್ನು ಮೆರೆಸುವತ್ತ ಸ್ವಲ್ಪ ಸಮಯವೇ ಹಿಡಿಯಿತು, ಪ್ರಕಟಣೆಯ ಮೂಲಕ ನಮ್ಮ ಸಂಸ್ಥೆಗೆ ಮೊದಲು ದಾನ ಮಾಡಿದ ಯಕ್ಷಪ್ರೇಮಿಯನ್ನು ಮತ್ತೊಮ್ಮೆ ನೆನೆಯುತ್ತಾ ಅವರಿಗೆ ಶುಭ ಹಾರೈಸುತ್ತಿದ್ದೇವೆ.
ಕಳೆದ ಮೂರು ವರ್ಷಗಳಲ್ಲಿ ನಮ್ಮ ಯೋಜನೆಗಳು ಬೆಳೆದಿವೆ, ಸಾಂಸ್ಥಿಕವಾಗಿ ನಾವು ನಿಧಾನವಾಗಿ ಬಲವಾಗುತ್ತಿದ್ದೇವೆ, ಸಾರ್ವಜನಿಕವಾದ ಹಣ ನಮ್ಮಲ್ಲಿ ಒಂದು ಪೈಸೆಯೂ ಪೋಲಾಗುವುದಿಲ್ಲ ಎಂಬ ಆತ್ಮ ವಿಶ್ವಾಸ ನಮ್ಮಲ್ಲಿ ಅಚಲವಾಗಿದೆ, ನಮಗೆ ದಾನವಾಗಿ ಬರುವ ಹಣವನ್ನು ಯೋಜನೆಗಳಲ್ಲಿ ಸದುಪಯೋಗ ಪಡಿಸುವತ್ತ ಖಚಿತ ದಾರಿಗಳೂ ಕಾಣಿಸುತ್ತಿವೆ. ಹಾಗಾಗಿಯೇ, ಅಕಾಡೆಮಿಯ ಪ್ರಾಯೋಜಕತ್ವದಲ್ಲಿ ಬಂದ ಪ್ರೋತ್ಸಾಹಧನದಲ್ಲಿ, ಸಂಬಂಧಿತ ಕವಿಯು ಸಮಕಾಲೀನರಿದ್ದರೆ, ಪ್ರಾಯೋಜಕತ್ವದ ೫೦ ಶೇಕಡಾ ಅಂಶವನ್ನು ಗೌರವಧನವಾಗಿ ಕವಿಗೇ ಸಲ್ಲಿಸಿ ಅವರ ಸೃಜನಶೀಲತೆಯನ್ನು ಗೌರವಿಸಿ ಪ್ರೋತ್ಸಾಹಿಸುವ ನಿರ್ಣಯ ತೆಗೆದುಕೊಂಡಿದ್ದೇವೆ. ಅಲ್ಲದೇ ಸಂಘದ ಕಾನೂನು ನಿರ್ವಹಣೆ, ತೆರಿಗೆ ಮತ್ತಿತರ ಅನಿರ್ವಾಯ ಸಾಂಘಿಕ ಖರ್ಚುಗಳು ಹೋಗಿ ಉಳಿಯುವ ಹಣವನ್ನು ಯಕ್ಷಗಾನ ಮಟ್ಟುಗಳ ಸುತ್ತಲಿನ ದಾಖಲೀಕರಣ ಮತ್ತಿತರ ಹಣ ಹೂಡಿಕೆ ಬೇಕೇ ಬೇಕಾಗುವ ಯೋಜನೆಗಳನ್ನು ಮೈಮೇಲೆ ಹಾಕಿಕೊಳ್ಳುವ ಶಕ್ತಿಯನ್ನು ಬೆಳೆಸುತ್ತಾ ಹೋಗಲಿದ್ದೇವೆ.
ಒಟ್ಟಿನಲ್ಲಿ, ನಾವು ಸಂಸ್ಥೆಗೆ ಹಣ ಸೇರಿಸುವತ್ತ ಬಿಕ್ಷಾಪಾತ್ರವನ್ನು ಹಿಡಿದು ಇನ್ನೂ ಹೊರಟಿಲ್ಲ, ಆದರೂ  ದಿನಗಳು ಬಹುಬೇಗ ಬರಲಿ. ನಿಟ್ಟಿನಲ್ಲಿ ನಮ್ಮ ಸಂಸ್ಥೆಯನ್ನು ಅನುದಾನಕ್ಕೆ ಅನುಗುಣವಾಗಿ ರೂಪಿಸುವತ್ತ 12A & 80G ನೋಂದಣಿ ಪಡೆಯಲು ಹೊರಟಿದ್ದೇವೆ, ಇದಕ್ಕೆ ಸುಮಾರು ೩೦-೪೦ ಸಾವಿರ ರೂಪಾಯಿಗಳ ಖರ್ಚು ಬರಬಹುದು, - ತಿಂಗಳ ಸಮಯವೂ ಬೇಕಾಗಬಹುದು.
ಆದರೆ ಈ ಹೊತ್ತಿಗೆ ದಾನಿಗಳಹಣವು ಅಯಾಚಿತವಾಗಿ ಬರುವುದಿದ್ದರೆ ಬರಲಿ,  ಕಾರಣ ಹಣ ಸೇರಿದಂತೆ ನಮ್ಮ ಯೋಜನೆಗಳ ಬಲವೂ ಹೆಚ್ಚುತ್ತದೆ. ಹಣಕ್ಕೆ ಸರಿಯಾಗಿ ಯಕ್ಷಪ್ರಸಂಗಕೋಶದಲ್ಲಿ ನಾವು ಪ್ರಕಟಿಸುವ ಪ್ರಸಂಗಗಳ ಪ್ರಾಯೋಜಕತ್ವದ ಕೃತಜ್ಞತಾ ನಡೆ ನಮ್ಮದಿದ್ದೇ ಇರುತ್ತದೆ.
ದಾನಿಗಳು ಕೆಳಗಿನ ಬ್ಯಾಂಕ್ಅಕೌಂಟಿಗೆ ಹಣವನ್ನು ನೇರವಾಗಿ ಸಲ್ಲಿಸಬಹುದಾಗಿದೆ. ಯಕ್ಷವಾಹಿನಿ ಸಂಸ್ಥೆಯು ಅನೇಕರು ಬೇರೆಬೇರೆ ರೀತಿಯಾಗಿ ಸಹಕರಿಸಿ ಬೆಳೆಸಿದಗೋಪಾಲಕನಾಗಿಯೇ ಬೆಳೆಯಲಿ, ಈಗಿನ ನಾಯಕತ್ವದ ಕಾಲ ದೇಶವನ್ನು ಮೀರಿ ವಿಶ್ವವ್ಯಾಪಿ ಕಾರ್ಯಾಚರಣೆಯ ಸಾಧ್ಯತೆಯತ್ತ ಅಪೂರ್ವವಾದ ಸಾರ್ವಜನಿಕ ಸ್ವಾಯತ್ತ ಸಂಸ್ಥೆಯಾಗಿ ರೂಪಿತವಾಗುತ್ತಾ ಹೋಗಲಿ ಎಂಬುದೇ ನಮ್ಮ ವಿನಮ್ರವಾದ ಪ್ರಾರ್ಥನೆ.

ದಾನಿಗಳಿಗೆ ಈ ಕೆಳಗಿನ ಬ್ಯಾಂಕ್ಅಕೌಂಟ್ಮಾಹಿತಿ ಬೇಕಾಗುತ್ತದೆ.

A/c Holder Name: Yakshavahini
Karnataka Bank Ltd.
Banashankari 3rdStage Branch
Bengaluru – 560085
A/C #: 0972500109931901
IFSC: KARB0000097

ಸ್ವಯಂಸೇವೆ, ಯೋಜನಾ ನಿರ್ವಹಣೆ, ದಾನ, ಅನುದಾನ, ಪ್ರೋತ್ಸಾಹಧನ, ಮಾರ್ಗದರ್ಶನ, ಶುಭಹಾರೈಕೆ, ನಲ್ನುಡಿ, ಧನಾತ್ಮಕ ಪ್ರಚಾರ, ಪ್ರೋತ್ಸಾಹ ರೀತಿಯಾಗಿ ಎಲ್ಲಾ ರೀತಿಯಲ್ಲಿಬರುತ್ತಿರುವ ನಿಮ್ಮ ಸೇವೆ, ಸಹಕಾರ, ಸಹಾಯಗಳಿಗೆಮತ್ತೊಮ್ಮೆ ವಂದಿಸುವ
ಡಾ. ಆನಂದರಾಮ ಉಪಾಧ್ಯ, ನಟರಾಜ ಉಪಾಧ್ಯ, ರವಿ ಮಡೋಡಿ
          ವಿಶ್ವಸ್ಥರು, ಯಕ್ಷವಾಹಿನಿ (ನೋಂದಣಿತ)
       
ನಮ್ಮ ಈವರೆಗಿನ ಯೋಜನೆಗಳು: ಯಕ್ಷಪ್ರಸಂಗಯಾದಿ, ಯಕ್ಷಪ್ರಸಂಗಕೋಶ, ಪ್ರಸಂಗಪ್ರತಿಸಂಗ್ರಹ

ಸಂಪರ್ಕ:
. ಪ್ರಸ೦ಗಪ್ರತಿಸ೦ಗ್ರಹ ಯೋಜನೆ:
ಅಶ್ವಿನಿ ಹೊದಲ: 9686112237
                   ನಟರಾಜ ಉಪಾಧ್ಯ: 9632824391
                   Email: prasangaprathisangraha@gmail.com

. ಯಕ್ಷಪ್ರಸ೦ಗಕೋಶ ಯೋಜನೆ:
                   ರವಿ ಮಡೋಡಿ: 9986384205
ನಟರಾಜ ಉಪಾಧ್ಯ: 9632824391
ಅಶ್ವಿನಿ ಹೊದಲ: 9686112237

. ಯಕ್ಷಪ್ರಸ೦ಗಯಾದಿ ಯೋಜನೆ:
ನಟರಾಜ ಉಪಾಧ್ಯ: 9632824391
ಅಶ್ವಿನಿ ಹೊದಲ: 9686112237

ಯಕ್ಷಪ್ರಸಂಗಕೋಶದಲ್ಲಿ ಡಿಜಿಟಲೀಕರಣಗೊಂಡ ಒಟ್ಟು ಪ್ರಸಂಗಗಳ ಸಂಖ್ಯೆ ೨೫೫!

  ಯಕ್ಷಪ್ರೇಮಿಗಳೇ, ಯಕ್ಷಸಾಹಿತ್ಯದ ಡಿಜಿಟಲೀಕರಣ ಯೋಜನೆಯಾದ ಯಕ್ಷಪ್ರಸಂಗಕೋಶಕ್ಕೆ ೧೮ನೇ ಹಂತದಲ್ಲಿ ೧೫ ಪ್ರಸಂಗಗಳು ಅಂತರಜಾಲ ಪ್ರತಿಗಳಾಗಿ ಲೋಕಾರ್ಪಣೆಯಾಗುವ ಮೂಲಕ ಈವರೆಗೆ...