Saturday, January 25, 2020

ಯಕ್ಷವಾಹಿನಿ ಸಂಸ್ಥೆ ಪ್ರಸ್ತುತ ಪಡಿಸುತ್ತಿರುವ ಯಕ್ಷಪ್ರಸಂಗಕೋಶ ಯೋಜನೆ – ಹನ್ನೆರಡನೇ ಮೈಲಿಗಲ್ಲಿನಲ್ಲಿ ೧೪ ಪ್ರಸಂಗಗಳ ಅಂತರಜಾಲ ಪ್ರತಿಗಳ ಲೋಕಾರ್ಪಣೆ!

ಯಕ್ಷವಾಹಿನಿ ಸಂಸ್ಥೆ ಪ್ರಸ್ತುತ ಪಡಿಸುತ್ತಿರುವ ಯಕ್ಷಪ್ರಸಂಗಕೋಶ ಯೋಜನೆ – ಹನ್ನೆರಡನೇ ಮೈಲಿಗಲ್ಲಿನಲ್ಲಿ ೧೪ ಪ್ರಸಂಗಗಳ ಅಂತರಜಾಲ ಪ್ರತಿಗಳ ಲೋಕಾರ್ಪಣೆ!



ಯಕ್ಷಪ್ರಸಂಗಕೋಶ ಯೋಜನೆಯ ೧೨ನೇ ಹಂತದಲ್ಲಿ ೧೪ ಪ್ರಸಂಗಗಳು ಅಂತರಜಾಲ ಪ್ರತಿಗಳಾಗಿ ಲೋಕಾರ್ಪಣೆಯಾಗುತ್ತಿವೆ.  ಈ ಮೂಲಕ ಈವರೆಗೆ ಒಟ್ಟು ೧೭೫ ಪ್ರಸಂಗಗಳು ಲೋಕಾರ್ಪಣೆಯಾಗಿವೆ.


(ಈವರೆಗೆ ಪ್ರಕಟವಾದ ಎಲ್ಲಾ ಪ್ರಸ೦ಗಗಳ ಪಟ್ಟಿಯನ್ನು ಒ೦ದೇ ಕಡೆಯಲ್ಲಿ ಕೊ೦ಡಿಯ ಮೂಲಕ ಕೊಡುವುದಲ್ಲದೇಸ೦ಬ೦ಧಿತ ದಸ್ತಾವೇಜನ್ನು (File) ನೀವು ಇಳಿಸಿಕೊ೦ಡರೆ (Download), ಮು೦ದೆ ಯಾವತ್ತಾದರೂಇಳಿಸಿಕೊ೦ಡ ಈ ದಸ್ತಾವೇಜಿನ ಮೊದಲ ಸಾಲಿನಲ್ಲಿ ಕೊಟ್ಟ ಅ೦ತರಜಾಲ ಕೊ೦ಡಿಯನ್ನು ಒತ್ತಿಕೊ೦ಡರೆಆ ಹೊತ್ತಿನೊಳಗೆ ನಮ್ಮಿ೦ದ ಇನ್ನಷ್ಟು ಪ್ರಸ೦ಗಗಳು ಲೋಕಾರ್ಪಣೆಯಾಗಿದ್ದಲ್ಲಿ ಅವುಗಳೂ ಸೇರಿದ ಹೊಸ ಪಟ್ಟಿಯ ಹೊಸ ದಸ್ತಾವೇಜು ನಿಮ್ಮ ಮು೦ದೆ ಅನಾವರಣಗೊ೦ಡು ಇಳಿಸಿಕೊಳ್ಳಲು ಸಿದ್ಧ! ಹಾಗಾಗಿನಮ್ಮ ಪ್ರಸ೦ಗ ಪಟ್ಟಿ ಹನುಮ೦ತನ ಬಾಲದ೦ತೆ ಬೆಳೆಯುತ್ತಾ ಹೋದರೂ ಒ೦ದೇ ದಸ್ತಾವೇಜನ್ನು ಇಟ್ಟುಕೊ೦ಡು ನಮ್ಮ ಪ್ರಸ೦ಗ ಖಜಾನೆಯನ್ನು  ನೀವು ಅನುಕ್ರಮಣಿಕೆಯಲ್ಲಿ ಹುಡುಕುತ್ತಾ ಬೇಕಾದುದನ್ನು ಇಳಿಸಿಕೊಳ್ಳಬಹುದು. ನಿಮಗೆ ಅವಸರದಲ್ಲಿ ಬೇಕಾಗಿರುವ ಪ್ರಸ೦ಗ ನಮ್ಮ ಖಜಾನೆಯಲ್ಲಿ ಇದೆಯೇ ಎ೦ದು ತಿಳಿಯುವುದು ಇನ್ನು ಮು೦ದೆ ಸುಲಭ ಸಾಧ್ಯ!)

ಈ ಬಾರಿ ಪ್ರಕಟವಾದ ೧೪ ಪ್ರಸಂಗಗಳ ಪಟ್ಟಿ:

ಗಾಂಧಾರಿ

ಅನಂತರಾಮ ಬಂಗಾಡಿ


ಭೀಷ್ಮಾರ್ಜುನರ ಕಾಳಗ
ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ


ಕರ್ಣಾರ್ಜುನ ಕಾಳಗ
ಪಾಂಡೇಶ್ವರ ವೆಂಕಟ

ಕುಂಭಕರ್ಣಾದಿ ಕಾಳಗ
ಪಾರ್ತಿಸುಬ್ಬ


ಗಜೇಂದ್ರ ಮೋಕ್ಷ
ಕಿರಿಯ ಬಲಿಪ ನಾರಾಯಣ ಭಾಗವತ

ಗರುಡ ಗರ್ವಭಂಗ
ಹಿರಿಯ ಬಲಿಪ ನಾರಾಯಣ ಭಾಗವತ


ವೀರವರ್ಮ ಕಾಳಗ
ಹಿರಿಯ ಬಲಿಪ ನಾರಾಯಣ ಭಾಗವತ


ಶ್ರೀ ದೇವಿ ಬನಶಂಕರಿ
ಕಂದಾವರ ರಘುರಾಮ ಶೆಟ್ಟಿ


ಆದಿಕವಿ ವಾಲ್ಮೀಕಿ
ಅಮೃತ ಸೋಮೇಶ್ವರ


೧೦ ಶ್ರೀ ಮೂಕಾಂಬಿಕಾ ಮಹಾತ್ಮೆ (ಕೌಂಹಾಸುರ ವಧೆ)
ಬಿ. ಬಾಬು ಕುಡ್ತಡ್ಕ


೧೧ ಕುಂತೀ ಸ್ವಯಂವರ
ಸೀತಾನದಿ ಗಣಪಯ್ಯ ಶೆಟ್ಟಿ

೧೨ ನಿಮಿಯಜ್ಞ
ರಾಧಾಕೃಷ್ಣ ಕಲ್ಚಾರ್‌


೧೩ ಮೈರಾವಣ ಕಾಳಗ
ಅಜಪುರದ ವಂಕಟ

೧೪ ಶಲ್ಯ ಭೇದನ
ರಾಧಾಕೃಷ್ಣ ಕಲ್ಚಾರ್‌


ಪ್ರತೀ ಪ್ರಸಂಗದ ಎರಡನೇ ಪುಟದಲ್ಲಿ ನಮ್ಮ ತಂಡದ ಸ್ವರೂಪವನ್ನು ಪ್ರಕಟಿಸಿದ್ದೇವೆ. ಈ ಪ್ರಕಟಣೆಯ ಕೊನೆಯಲ್ಲೂ ಇದನ್ನು ಸೇರಿಸಿದ್ದೇವೆ. 
ಎಂದಿನಂತೆ, ಪ್ರತೀ ಪ್ರಸಂಗಕ್ಕೆ ಸಂದ ಸ್ವಯಂಸೇವಕರ ಅಳಿಲು ಸೇವೆಯನ್ನು ಪ್ರಸಂಗದ ಕೊನೆಯ ಪುಟದಲ್ಲಿ “ಕೃತಜ್ಞತೆಗಳು” ಶೀರ್ಷಿಕೆಯಡಿ ಪ್ರೀತಿ ಗೌರವಗಳಿಂದ ನೆನಪಿಸಿಕೊಂಡಿದ್ದೇವೆ. 


ವಂದನೆಗಳೊ೦ದಿಗೆ,

ರವಿ ಮಡೋಡಿ
ಯಕ್ಷಪ್ರಸಂಗಯೋಜನೆ ಸಮೂಹ ಹಾಗೂ ಯಕ್ಷವಾಹಿನಿ ಸಂಸ್ಥೆ/ಸಮೂಹಗಳ ಪರವಾಗಿ




No comments:

Post a Comment

ಯಕ್ಷಪ್ರಸಂಗಕೋಶದಲ್ಲಿ ಡಿಜಿಟಲೀಕರಣಗೊಂಡ ಒಟ್ಟು ಪ್ರಸಂಗಗಳ ಸಂಖ್ಯೆ ೨೫೫!

  ಯಕ್ಷಪ್ರೇಮಿಗಳೇ, ಯಕ್ಷಸಾಹಿತ್ಯದ ಡಿಜಿಟಲೀಕರಣ ಯೋಜನೆಯಾದ ಯಕ್ಷಪ್ರಸಂಗಕೋಶಕ್ಕೆ ೧೮ನೇ ಹಂತದಲ್ಲಿ ೧೫ ಪ್ರಸಂಗಗಳು ಅಂತರಜಾಲ ಪ್ರತಿಗಳಾಗಿ ಲೋಕಾರ್ಪಣೆಯಾಗುವ ಮೂಲಕ ಈವರೆಗೆ...