ಯಕ್ಷಪ್ರಸಂಗಕೋಶ ಯೋಜನೆಯ ೧೩ನೇ ಹಂತದಲ್ಲಿ ೧೫ ಪ್ರಸಂಗಗಳು ಅಂತರಜಾಲ ಪ್ರತಿಗಳಾಗಿ ಲೋಕಾರ್ಪಣೆಯಾಗುತ್ತಿವೆ. ಈ ಮೂಲಕ ಈವರೆಗೆ ಒಟ್ಟು ೧೯೦ ಪ್ರಸಂಗಗಳು ಲೋಕಾರ್ಪಣೆಯಾಗಿವೆ.
(ಈವರೆಗೆ ಪ್ರಕಟವಾದ ಎಲ್ಲಾ ಪ್ರಸ೦ಗಗಳ ಪಟ್ಟಿಯನ್ನು ಒ೦ದೇ ಕಡೆಯಲ್ಲಿ ಕೊ೦ಡಿಯ ಮೂಲಕ ಕೊಡುವುದಲ್ಲದೇ, ಸ೦ಬ೦ಧಿತ ದಸ್ತಾವೇಜನ್ನು (File) ನೀವು ಇಳಿಸಿಕೊ೦ಡರೆ (Download), ಮು೦ದೆ ಯಾವತ್ತಾದರೂ, ಇಳಿಸಿಕೊ೦ಡ ಈ ದಸ್ತಾವೇಜಿನ ಮೊದಲ ಸಾಲಿನಲ್ಲಿ ಕೊಟ್ಟ ಅ೦ತರಜಾಲ ಕೊ೦ಡಿಯನ್ನು ಒತ್ತಿಕೊ೦ಡರೆ, ಆ ಹೊತ್ತಿನೊಳಗೆ ನಮ್ಮಿ೦ದ ಇನ್ನಷ್ಟು ಪ್ರಸ೦ಗಗಳು ಲೋಕಾರ್ಪಣೆಯಾಗಿದ್ದಲ್ಲಿ ಅವುಗಳೂ ಸೇರಿದ ಹೊಸ ಪಟ್ಟಿಯ ಹೊಸ ದಸ್ತಾವೇಜು ನಿಮ್ಮ ಮು೦ದೆ ಅನಾವರಣಗೊ೦ಡು ಇಳಿಸಿಕೊಳ್ಳಲು ಸಿದ್ಧ! ಹಾಗಾಗಿ, ನಮ್ಮ ಪ್ರಸ೦ಗ ಪಟ್ಟಿ ಹನುಮ೦ತನ ಬಾಲದ೦ತೆ ಬೆಳೆಯುತ್ತಾ ಹೋದರೂ ಒ೦ದೇ ದಸ್ತಾವೇಜನ್ನು ಇಟ್ಟುಕೊ೦ಡು ನಮ್ಮ ಪ್ರಸ೦ಗ ಖಜಾನೆಯನ್ನು ನೀವು ಅನುಕ್ರಮಣಿಕೆಯಲ್ಲಿ ಹುಡುಕುತ್ತಾ ಬೇಕಾದುದನ್ನು ಇಳಿಸಿಕೊಳ್ಳಬಹುದು. ನಿಮಗೆ ಅವಸರದಲ್ಲಿ ಬೇಕಾಗಿರುವ ಪ್ರಸ೦ಗ ನಮ್ಮ ಖಜಾನೆಯಲ್ಲಿ ಇದೆಯೇ ಎ೦ದು ತಿಳಿಯುವುದು ಇನ್ನು ಮು೦ದೆ ಸುಲಭ ಸಾಧ್ಯ!)
ಈ ಬಾರಿ ಪ್ರಕಟವಾದ ೧೫ ಪ್ರಸಂಗಗಳ ಪಟ್ಟಿ:
ಕ್ರಮಸಂಖ್ಯೆ
|
ಪ್ರಸಂಗ
|
ಕವಿ
|
ಪಿಡಿಎಫ್ ಕೊಂಡಿ
|
೧
|
ಚಂದ್ರಕಾಂತಿ
|
ಮಧೂರು ವೆಂಕಟಕೃಷ್ಣ
|
|
೨
|
ದೇವಸೇನಾ ಪರಿಣಯ
|
ಶಿವಕುಮಾರ ಬಿ. ಎ. ಅಳಗೋಡು
|
|
೩
|
ಭೀಮಶಂಕರ ಮಹಿಮೆ
|
ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ಟರು
|
|
೪
|
ಭೂ ಕೈಲಾಸ (ಗೋಕರ್ಣ ಕ್ಷೇತ್ರಮಹಾತ್ಮೆ)
|
ಮುದ್ರಾಡಿ ವೆಂಕಪ್ಪಯ್ಯ
|
|
೫
|
ರಾವಣೋದ್ಭವ
|
ನಗಿರೆ ಸುಬ್ರಹ್ಮಣ್ಯ
|
|
೬
|
ವಿಶ್ವಾಮಿತ್ರ ಪ್ರತಾಪ ಮತ್ತು ದುಷ್ಯಂತ
ಚರಿತ್ರೆ
|
ಬವಲಾಡಿ ಹಿರಿಯಣ್ಣ ಹೆಬ್ಬಾರ
|
|
೭
|
ವೀರ ಮಕರಾಕ್ಷ
|
ಅಡೂರು ಬಳಕಿಲ ವಿಷ್ಣಯ್ಯ
|
|
೮
|
ಶಲ್ಯ ಸಂಗ್ರಹ
|
ಶ್ರೀಧರ ಡಿ. ಎಸ್
|
|
೯
|
ಶಲ್ಯಾಗಮನ
|
ದಿನೇಶ ಉಪ್ಪೂರ ಎಮ್. ಎನ್.
|
|
೧೦
|
ಶಲ್ಯಾವಸಾನ
|
ಅಡೂರು ಬಳಕಿಲ ವಿಷ್ಣಯ್ಯ
|
|
೧೧
|
ಶಶಿಪ್ರಭಾ ಪರಿಣಯ
|
ಪೆರಡೂರು ರಘುರಾಮ ಮಲ್ಯ
|
|
೧೨
|
ಶ್ರೀಕೃಷ್ಣ ವಿಜಯ
|
ಜಾಣ ಮಂಜಪ್ಪ
|
|
೧೩
|
ಸತ್ಯವಾನ್ ಸಾವಿತ್ರಿ
(ಸತೀ ಶಕ್ತಿ)
|
ಆತ್ಮಾರಾಮ ಅಮ್ಮನಳ್ಳಿ
|
|
೧೪
|
ಸಾಹಸಭೀಮ ವಿಜಯ
|
ಕೆ. ಪಿ. ವೆ೦ಕಪ್ಪ ಶೆಟ್ಟಿ
|
|
೧೫
|
ಸುಂದೋಪಸುಂದರ ಕಾಳಗ
|
ಅಡೂರು ಬಳಕಿಲ ವಿಷ್ಣಯ್ಯ
|
ಪ್ರತೀ ಪ್ರಸಂಗದ ಎರಡನೇ ಪುಟದಲ್ಲಿ ನಮ್ಮ ತಂಡದ ಸ್ವರೂಪವನ್ನು ಪ್ರಕಟಿಸಿದ್ದೇವೆ. ಈ ಪ್ರಕಟಣೆಯ ಕೊನೆಯಲ್ಲೂ ಇದನ್ನು ಸೇರಿಸಿದ್ದೇವೆ.
ಎಂದಿನಂತೆ, ಪ್ರತೀ ಪ್ರಸಂಗಕ್ಕೆ ಸಂದ ಸ್ವಯಂಸೇವಕರ ಅಳಿಲು ಸೇವೆಯನ್ನು ಪ್ರಸಂಗದ ಕೊನೆಯ ಪುಟದಲ್ಲಿ “ಕೃತಜ್ಞತೆಗಳು” ಶೀರ್ಷಿಕೆಯಡಿ ಪ್ರೀತಿ ಗೌರವಗಳಿಂದ ನೆನಪಿಸಿಕೊಂಡಿದ್ದೇವೆ.
ವಂದನೆಗಳೊ೦ದಿಗೆ,
ರವಿ ಮಡೋಡಿ
ಯಕ್ಷಪ್ರಸಂಗಕೋಶಯೋಜನೆ ಸಮೂಹ ಹಾಗೂ ಯಕ್ಷವಾಹಿನಿ ಸಂಸ್ಥೆ /ಸಮೂಹಗಳ ಪರವಾಗಿ