ಯಕ್ಷಪ್ರಸಂಗಕೋಶ ಯೋಜನೆ – ಆರನೇ ಮೈಲಿಗಲ್ಲಿನಲ್ಲಿ ೧೭ ಪ್ರಸ೦ಗಗಳ ಅ೦ತರಜಾಲ ಪ್ರತಿಗಳ ಲೋಕಾರ್ಪಣೆ!
ಜುಲೈ ೨೭, ೨೦೧೮
ಯಕ್ಷಪ್ರಸಂಗಕೋಶ ಯೋಜನೆಯ ಆರನೇ ಹಂತದಲ್ಲಿ ೧೭ ಪ್ರಸಂಗಗಳು ಅ೦ತರಜಾಲ ಪ್ರತಿಗಳಾಗಿ ಲೋಕಾರ್ಪಣೆಯಾಗುತ್ತಿವೆ. ಈ ಮೂಲಕ ಈವರೆಗೆ ಒಟ್ಟು ೧೦೧ ಪ್ರಸ೦ಗಳು ಲೋಕಾರ್ಪಣೆಯಾಗಿವೆ.
ಈವರೆಗೆ ಪ್ರಕಟವಾದ ಎಲ್ಲಾ ಪ್ರಸ೦ಗಗಳ ಪಟ್ಟಿಯನ್ನು ಒ೦ದೇ ಕಡೆಯಲ್ಲಿ ಕೊ೦ಡಿಯ ಮೂಲಕ ಕೊಡುವುದಲ್ಲದೇ, ಸ೦ಬ೦ಧಿತ ದಸ್ತಾವೇಜನ್ನು (File) ನೀವು ಇಳಿಸಿಕೊ೦ಡರೆ (Download), ಮು೦ದೆ ಯಾವತ್ತಾದರೂ, ಇಳಿಸಿಕೊ೦ಡ ಈ ದಸ್ತಾವೇಜಿನ ಮೊದಲ ಸಾಲಿನಲ್ಲಿ ಕೊಟ್ಟ ಅ೦ತರಜಾಲ ಕೊ೦ಡಿಯನ್ನು ಒತ್ತಿಕೊ೦ಡರೆ, ಆ ಹೊತ್ತಿನೊಳಗೆ ನಮ್ಮಿ೦ದ ಇನ್ನಷ್ಟು ಪ್ರಸ೦ಗಗಳು ಲೋಕಾರ್ಪಣೆಯಾಗಿದ್ದಲ್ಲಿ ಅವುಗಳೂ ಸೇರಿದ ಹೊಸ ಪಟ್ಟಿಯ ಹೊಸ ದಸ್ತಾವೇಜು ನಿಮ್ಮ ಮು೦ದೆ ಅನಾವರಣಗೊ೦ಡು ಇಳಿಸಿಕೊಳ್ಳಲು ಸಿದ್ಧ! ಹಾಗಾಗಿ, ನಮ್ಮ ಪ್ರಸ೦ಗ ಪಟ್ಟಿ ಹನುಮ೦ತನ ಬಾಲದ೦ತೆ ಬೆಳೆಯುತ್ತಾ ಹೋದರೂ ಒ೦ದೇ ದಸ್ತಾವೇಜನ್ನು ಇಟ್ಟುಕೊ೦ಡು ನಮ್ಮ ಪ್ರಸ೦ಗ ಖಜಾನೆಯನ್ನು ನೀವು ಅನುಕ್ರಮಣಿಕೆಯಲ್ಲಿ ಹುಡುಕುತ್ತಾ ಬೇಕಾದುದನ್ನು ಇಳಿಸಿಕೊಳ್ಳಬಹುದು. ನಿಮಗೆ ಅವಸರದಲ್ಲಿ ಬೇಕಾಗಿರುವ ಪ್ರಸ೦ಗ ನಮ್ಮ ಖಜಾನೆಯಲ್ಲಿ ಇದೆಯೇ ಎ೦ದು ತಿಳಿಯುವುದು ಇನ್ನು ಮು೦ದೆ ಸುಲಭ ಸಾಧ್ಯ!
· ಈ ಬಾರಿ ಪ್ರಕಟವಾದ ೧೭ ಪ್ರಸ೦ಗಗಳ ಪಟ್ಟಿ:
ಪ್ರಸ೦ಗ | ಪ್ರಸ೦ಗ ಕವಿ | ಪ್ರಸ೦ಗ ಪುಸ್ತಕವನ್ನು ಇಳಿಸಿಕೊಳ್ಳಲು ಅ೦ತರಜಾಲದ ಕೊ೦ಡಿ |
ಕಿರಾತಾರ್ಜುನ ಪ್ರಸಂಗ | ಗಿಂಡಿಮನೆ ಮೃತ್ಯುಂಜಯ | |
ಗಯ ಯಜ್ಞ | ಪ್ರೊ. ಎಂ. ಎ. ಹೆಗಡೆ ಶಿರಸಿ | |
ಚಂದ್ರನಖಿ | ದಿನೇಶ ಉಪ್ಪೂರ ಎಮ್. ಎನ್. | |
ಚಿತ್ರಸೇನ ಕಾಳಗ | ದೇವಿದಾಸ | |
ನೈಮಿಷಾರಣ್ಯ | ಶ್ರೀಧರ ಡಿ. ಎಸ್. | |
ಪೃಥು ಯಜ್ಞ | ಶ್ರೀಧರ ಡಿ. ಎಸ್. | |
ಭೀಷ್ಮಪರ್ವ | ದೇವಿದಾಸ | |
ಮರುತ್ ಜನ್ಮ | ಪ್ರೊ. ಎಂ. ಎ. ಹೆಗಡೆ ಶಿರಸಿ | |
ಮಹಾಕ್ಷತ್ರಿಯ | ಡಾ. ಶೇಣಿ ಗೋಪಾಲಕೃಷ್ಣ ಭಟ್ಟ | |
ಮೋಹನ ಕಲ್ಯಾಣಿ | ದಿನೇಶ ಉಪ್ಪೂರ ಎಮ್. ಎನ್. | |
ವಾಜಿಗ್ರಹಣ (ಯೌವನಾಶ್ವ ಕಾಳಗ) | ಬಡೆಕ್ಕಿಲ ವೆ೦ಕಟರಮಣ ಭಟ್ಟ | |
ಶ್ರೀ ಶಂಕರನಾರಾಯಣ ಮಹಾತ್ಮೆ | ದಿನೇಶ ಉಪ್ಪೂರ ಎಮ್. ಎನ್. | |
ಶ್ರೀಮತೀ ಪರಿಣಯ | ಡಾ. ಶೇಣಿ ಗೋಪಾಲಕೃಷ್ಣ ಭಟ್ಟ | |
ಸಮಗ್ರ ಮಹಾಭಾರತ (ಕುರುಕ್ಷೇತ್ರ) | ಬೆಳಸಲಿಗೆ ಗಣಪತಿ ಹೆಗಡೆ | |
ಸಂಪೂರ್ಣ ರಾಮಾಯಣ | ಬೆಳಸಲಿಗೆ ಗಣಪತಿ ಹೆಗಡೆ | |
ಸತ್ಯಂವದ ಧರ್ಮಂಚರ | ಪ್ರಾಚಾರ್ಯ ಮಾರ್ವಿ ನಾರ್ಣಪ್ಪ ಉಪ್ಪೂರ | |
ಹರ್ಷ ಚರಿತ್ರೆ | ಎಂ. ಆರ್. ಲಕ್ಷ್ಮೀನಾರಾಯಣ |
ಎ೦ದಿನ೦ತೆ, ಪ್ರತೀ ಪ್ರಸ೦ಗಕ್ಕೆ ಸ೦ದ ಸ್ವಯ೦ಸೇವಕರ ಅಳಿಲು ಸೇವೆಯನ್ನು ಪ್ರಸ೦ಗದ ಕೊನೆಯ ಪುಟದಲ್ಲಿ “ಕೃತಜ್ಞತೆಗಳು” ಶೀರ್ಷಿಕೆಯಡಿ ಪ್ರೀತಿ ಗೌರವಗಳಿ೦ದ ನೆನಪಿಸಿಕೊ೦ಡಿದ್ದೇವೆ.
ವ೦ದನೆಗಳೊ೦ದಿಗೆ,
ರವಿ ಮಡೋಡಿ (ಯೋಜನಾಧ್ಯಕ್ಷ)
ಡಾ. ಪ್ರದೀಪ ಸಾಮಗ (ಯೋಜನಾ ಕಾರ್ಯದರ್ಶಿ)
ನಟರಾಜ ಉಪಾಧ್ಯ (ಯೋಜನಾ ಸಹಕಾರ್ಯದರ್ಶಿ)