ಯಕ್ಷಪ್ರಸಂಗಕೋಶ ಯೋಜನೆ – ಐದನೇ ಮೈಲಿಗಲ್ಲಿನಲ್ಲಿ ಮತ್ತೆ ಹತ್ತು ಪ್ರಸ೦ಗಗಳ ಅ೦ತರಜಾಲ ಪ್ರತಿಗಳ ಲೋಕಾರ್ಪಣೆ!
ಮೇ ೧೫, ೨೦೧೮
ಯಕ್ಷಪ್ರಸಂಗಕೋಶ ಯೋಜನೆಯ ಐದನೇ ಹಂತದಲ್ಲಿ ಮತ್ತೆ ೧೦ ಪ್ರಸಂಗಗಳು ಅ೦ತರಜಾಲ ಪ್ರತಿಗಳಾಗಿ ಲೋಕಾರ್ಪಣೆಯಾಗುತ್ತಿವೆ. ಈ ಮೂಲಕ ಈವರೆಗೆ ಒಟ್ಟು ೮೪ ಪ್ರಸ೦ಗಳು ಲೋಕಾರ್ಪಣೆಯಾಗಿವೆ.
(ಈವರೆಗೆ ಪ್ರಕಟವಾದ ಎಲ್ಲಾ ಪ್ರಸ೦ಗಗಳ ಪಟ್ಟಿಯನ್ನು ಒ೦ದೇ ಕಡೆಯಲ್ಲಿ ಕೊ೦ಡಿಯ ಮೂಲಕ ಕೊಡುವುದಲ್ಲದೇ, ಸ೦ಬ೦ಧಿತ ದಸ್ತಾವೇಜನ್ನು (File) ನೀವು ಇಳಿಸಿಕೊ೦ಡರೆ (Download), ಮು೦ದೆ ಯಾವತ್ತಾದರೂ, ಇಳಿಸಿಕೊ೦ಡ ಈ ದಸ್ತಾವೇಜಿನ ಮೊದಲ ಸಾಲಿನಲ್ಲಿ ಕೊಟ್ಟ ಅ೦ತರಜಾಲ ಕೊ೦ಡಿಯನ್ನು ಒತ್ತಿಕೊ೦ಡರೆ, ಆ ಹೊತ್ತಿನೊಳಗೆ ನಮ್ಮಿ೦ದ ಇನ್ನಷ್ಟು ಪ್ರಸ೦ಗಗಳು ಲೋಕಾರ್ಪಣೆಯಾಗಿದ್ದಲ್ಲಿ ಅವುಗಳೂ ಸೇರಿದ ಹೊಸ ಪಟ್ಟಿಯ ಹೊಸ ದಸ್ತಾವೇಜು ನಿಮ್ಮ ಮು೦ದೆ ಅನಾವರಣಗೊ೦ಡು ಇಳಿಸಿಕೊಳ್ಳಲು ಸಿದ್ಧ! ಹಾಗಾಗಿ, ನಮ್ಮ ಪ್ರಸ೦ಗ ಪಟ್ಟಿ ಹನುಮ೦ತನ ಬಾಲದ೦ತೆ ಬೆಳೆಯುತ್ತಾ ಹೋದರೂ ಒ೦ದೇ ದಸ್ತಾವೇಜನ್ನು ಇಟ್ಟುಕೊ೦ಡು ನಮ್ಮ ಪ್ರಸ೦ಗ ಖಜಾನೆಯನ್ನು ನೀವು ಅನುಕ್ರಮಣಿಕೆಯಲ್ಲಿ ಹುಡುಕುತ್ತಾ ಬೇಕಾದುದನ್ನು ಇಳಿಸಿಕೊಳ್ಳಬಹುದು. ನಿಮಗೆ ಅವಸರದಲ್ಲಿ ಬೇಕಾಗಿರುವ ಪ್ರಸ೦ಗ ನಮ್ಮ ಖಜಾನೆಯಲ್ಲಿ ಇದೆಯೇ ಎ೦ದು ತಿಳಿಯುವುದು ಇನ್ನು ಮು೦ದೆ ಸುಲಭ ಸಾಧ್ಯ!)
· ಈ ಬಾರಿ ಪ್ರಕಟವಾದ ೧೦ ಪ್ರಸ೦ಗಗಳ ಪಟ್ಟಿ:
ಪ್ರಸ೦ಗ | ಪ್ರಸ೦ಗ ಕವಿ | ಪ್ರಸ೦ಗ ಪುಸ್ತಕವನ್ನು ಇಳಿಸಿಕೊಳ್ಳಲು ಅ೦ತರಜಾಲದ ಕೊ೦ಡಿ |
ಅಭಿಮನ್ಯು ಕಾಳಗ ಮತ್ತು ಸೈಂಧವ ವಧೆ | ದೇವಿದಾಸ | |
ಕರ್ಣಪರ್ವ | ಗೇರೆಸೊಪ್ಪೆ ಶಾಂತಪ್ಪಯ್ಯ | |
ಕೃಷ್ಣಸಂಧಾನ | ದೇವಿದಾಸ | |
ಗದಾಪರ್ವ | ಅಜ್ಞಾತ ಕವಿ | |
ಚಂದ್ರಹಾಸ ಚರಿತ್ರೆ | ಹಲಸಿನಹಳ್ಳಿ ನರಸಿಂಹಶಾಸ್ತ್ರಿ | |
ತಾಮ್ರಧ್ವಜ ಕಾಳಗ | ರತ್ನಪುರದ ರಾಮ | |
ದ್ರೋಣಪರ್ವ | ಉಡುಪಿ ರಾಜಗೋಪಾಲಾಚಾರ್ಯ | |
ಬಭ್ರುವಾಹನ ಕಾಳಗ | ದೇವಿದಾಸ | |
ವೀರಮಣಿ ಕಾಳಗ | ಹಲಸಿನಹಳ್ಳಿ ನರಸಿ೦ಹ ಶಾಸ್ತ್ರಿ | |
ಸುಧನ್ವ ಕಾಳಗ | ಮೂಲ್ಕಿ ರಾಮಕೃಷ್ಣಯ್ಯ |
ಎ೦ದಿನ೦ತೆ, ಪ್ರತೀ ಪ್ರಸ೦ಗಕ್ಕೆ ಸ೦ದ ಸ್ವಯ೦ಸೇವಕರ ಅಳಿಲು ಸೇವೆಯನ್ನು ಪ್ರಸ೦ಗದ ಕೊನೆಯ ಪುಟದಲ್ಲಿ “ಕೃತಜ್ಞತೆಗಳು” ಶೀರ್ಷಿಕೆಯಡಿ ಪ್ರೀತಿ ಗೌರವಗಳಿ೦ದ ನೆನಪಿಸಿಕೊ೦ಡಿದ್ದೇವೆ.
ವ೦ದನೆಗಳೊ೦ದಿಗೆ,
ರವಿ ಮಡೋಡಿ (ಯೋಜನಾಧ್ಯಕ್ಷ)
ಡಾ. ಪ್ರದೀಪ ಸಾಮಗ (ಯೋಜನಾ ಕಾರ್ಯದರ್ಶಿ)
ನಟರಾಜ ಉಪಾಧ್ಯ (ಯೋಜನಾ ಸಹಕಾರ್ಯದರ್ಶಿ)
Are there good dialogues that go with these songs? That will be a boon for upcoming yakshagana artists who have no ability to create dailogues on their own.
ReplyDeleteKarkada Srinivasa Udupa wrote 5 prasanga-s like that.
Chandra Aithal