Thursday, February 28, 2019

ಯಕ್ಷಪ್ರಸಂಗಕೋಶ ಯೋಜನೆ – ಒ೦ಭತ್ತನೇ ಮೈಲಿಗಲ್ಲಿನಲ್ಲಿ ೧೩ ಪ್ರಸ೦ಗಗಳ ಅ೦ತರಜಾಲ ಪ್ರತಿಗಳ ಲೋಕಾರ್ಪಣೆ!



ಫೆಬ್ರವರಿ ೨೮, ೨೦೧೯

ಯಕ್ಷಪ್ರಸಂಗಕೋಶ ಯೋಜನೆಯ ೯ನೇ ಹಂತದಲ್ಲಿ ೧೩ ಪ್ರಸಂಗಗಳು ಅ೦ತರಜಾಲ ಪ್ರತಿಗಳಾಗಿ ಲೋಕಾರ್ಪಣೆಯಾಗುತ್ತಿವೆ.  ಈ ಮೂಲಕ ಈವರೆಗೆ ಒಟ್ಟು ೧೩೭ ಪ್ರಸ೦ಗಗಳು ಲೋಕಾರ್ಪಣೆಯಾಗಿವೆ.


(ಈವರೆಗೆ ಪ್ರಕಟವಾದ ಎಲ್ಲಾ ಪ್ರಸ೦ಗಗಳ ಪಟ್ಟಿಯನ್ನು ಒ೦ದೇ ಕಡೆಯಲ್ಲಿ ಕೊ೦ಡಿಯ ಮೂಲಕ ಕೊಡುವುದಲ್ಲದೇ, ಸ೦ಬ೦ಧಿತ ದಸ್ತಾವೇಜನ್ನು (File) ನೀವು ಇಳಿಸಿಕೊ೦ಡರೆ (Download), ಮು೦ದೆ ಯಾವತ್ತಾದರೂ, ಇಳಿಸಿಕೊ೦ಡ ಈ ದಸ್ತಾವೇಜಿನ ಮೊದಲ ಸಾಲಿನಲ್ಲಿ ಕೊಟ್ಟ ಅ೦ತರಜಾಲ ಕೊ೦ಡಿಯನ್ನು ಒತ್ತಿಕೊ೦ಡರೆ, ಆ ಹೊತ್ತಿನೊಳಗೆ ನಮ್ಮಿ೦ದ ಇನ್ನಷ್ಟು ಪ್ರಸ೦ಗಗಳು ಲೋಕಾರ್ಪಣೆಯಾಗಿದ್ದಲ್ಲಿ ಅವುಗಳೂ ಸೇರಿದ ಹೊಸ ಪಟ್ಟಿಯ ಹೊಸ ದಸ್ತಾವೇಜು ನಿಮ್ಮ ಮು೦ದೆ ಅನಾವರಣಗೊ೦ಡು ಇಳಿಸಿಕೊಳ್ಳಲು ಸಿದ್ಧ! ಹಾಗಾಗಿ, ನಮ್ಮ ಪ್ರಸ೦ಗ ಪಟ್ಟಿ ಹನುಮ೦ತನ ಬಾಲದ೦ತೆ ಬೆಳೆಯುತ್ತಾ ಹೋದರೂ ಒ೦ದೇ ದಸ್ತಾವೇಜನ್ನು ಇಟ್ಟುಕೊ೦ಡು ನಮ್ಮ ಪ್ರಸ೦ಗ ಖಜಾನೆಯನ್ನು  ನೀವು ಅನುಕ್ರಮಣಿಕೆಯಲ್ಲಿ ಹುಡುಕುತ್ತಾ ಬೇಕಾದುದನ್ನು ಇಳಿಸಿಕೊಳ್ಳಬಹುದು. ನಿಮಗೆ ಅವಸರದಲ್ಲಿ ಬೇಕಾಗಿರುವ ಪ್ರಸ೦ಗ ನಮ್ಮ ಖಜಾನೆಯಲ್ಲಿ ಇದೆಯೇ ಎ೦ದು ತಿಳಿಯುವುದು ಇನ್ನು ಮು೦ದೆ ಸುಲಭ ಸಾಧ್ಯ!)

       ಈ ಬಾರಿ ಪ್ರಕಟವಾದ ೧೩ ಪ್ರಸ೦ಗಗಳ ಪಟ್ಟಿ:
ಪ್ರಸ೦ಗ
ಕವಿ
ಪ್ರಸ೦ಗ ಪುಸ್ತಿಕೆ pdf ಕೊOಡಿ
ಇಂದ್ರಕೀಲಕ
ಅಜಪುರ ವಿಷ್ಣು
ಖಾ೦ಡವ ದಹನ
ಪ್ರೊ. ಎಂ. ಎ. ಹೆಗಡೆ  ಶಿರಸಿ
ಖಾಂಡವ ವನ ದಹನ
ಚೊಕ್ಕಾಡಿ ಗಣಪಯ್ಯ
ಚಕ್ರಚಂಡಿಕೆ
ಗುಂಡು ಸೀತಾರಾಮ್
ತ್ರಿಪುರ ಮಥನ
ವಿದ್ವಾನ್ ಡಿ. ವಿ. ಹೊಳ್ಳ
ಪ್ರತಿಮಾ ಪ್ರಸಂಗ
ದಿನೇಶ ಉಪ್ಪೂರ
ಬ್ರಹ್ಮಕಪಾಲ
ಕನ್ಯಾನ ವೆಂಕಟರಮಣ ಭಟ್ಟ
ವಿಷಯೆ ಕಲ್ಯಾಣ
ಮಾಲೆಕೊಡ್ಲು ಶಂಭು ಗಣಪತಿ ಭಟ್ಟ
ಶ್ರವಣ ಕುಮಾರ ಚರಿತ್ರೆ
ಬಲಿಪ ನಾರಾಯಣ ಭಾಗವತ (ಕಿರಿಯ)
ಸತ್ಯಹರಿಶ್ಚಂದ್ರಕಥಾ
ಜಾನಕೈ ತಿಮ್ಮಪ್ಪ ಹೆಗಡೆ
ಸೀತಾವಿಯೋಗ ಮತ್ತು ಲವಕುಶ
ಪ್ರೊ. ಎಂ. ಎ. ಹೆಗಡೆ
ಸುಭದ್ರಾ ಕಲ್ಯಾಣ
ಹಟ್ಟಿಯಂಗಡಿ ರಾಮಭಟ್ಟ
ಹರಿಶ್ಚಂದ್ರ ಚರಿತ್ರೆ
ನಾರಾಯಣ ನಾಗಪ್ಪ ಜೋಷಿ

ಈ ಬಾರಿಯಿ೦ದ, ಪ್ರತೀ ಪ್ರಸ೦ಗದ ಎರಡನೇ ಪುಟದಲ್ಲಿ ನಮ್ಮ ತ೦ಡದ ಸ್ವರೂಪವನ್ನು ಪ್ರಕಟಿಸಿದ್ದೇವೆ. ಈ ಪ್ರಕಟಣೆಯ ಕೊನೆಯಲ್ಲೂ ಇದನ್ನು ಸೇರಿಸಿದ್ದೇವೆ.
  
ಎ೦ದಿನ೦ತೆ, ಪ್ರತೀ ಪ್ರಸ೦ಗಕ್ಕೆ ಸ೦ದ ಸ್ವಯ೦ಸೇವಕರ ಅಳಿಲು ಸೇವೆಯನ್ನು ಪ್ರಸ೦ಗದ ಕೊನೆಯ ಪುಟದಲ್ಲಿ “ಕೃತಜ್ಞತೆಗಳು” ಶೀರ್ಷಿಕೆಯಡಿ ಪ್ರೀತಿ ಗೌರವಗಳಿ೦ದ ನೆನಪಿಸಿಕೊ೦ಡಿದ್ದೇವೆ. 

ವ೦ದನೆಗಳೊ೦ದಿಗೆ,
ರವಿ ಮಡೋಡಿ (ಯೋಜನಾಧ್ಯಕ್ಷ)
ಡಾ. ಪ್ರದೀಪ ಸಾಮಗ (ಯೋಜನಾ ಕಾರ್ಯದರ್ಶಿ)
ನಟರಾಜ ಉಪಾಧ್ಯ (ಯೋಜನಾ ಸಹಕಾರ್ಯದರ್ಶಿ)

ಯಕ್ಷಪ್ರಸಂಗಕೋಶ ಯೋಜನಾ ಸಮೂಹ
ಗೌರವಾನ್ವಿತ ಸ೦ಪಾದಕ ಮ೦ಡಳಿ: ಡಿ. ಎಸ್. ಶ್ರೀಧರ (ಗೌರವಾಧ್ಯಕ್ಷರು), ಗಿ೦ಡಿಮನೆ ಮೃತ್ಯು೦ಜಯ, ಡಾ. ಆನ೦ದರಾಮ ಉಪಾಧ್ಯ, ದಿನೇಶ ಉಪ್ಪೂರ, ಅಶೋಕ್ ಮುಂಗಳಿಮನೆ
ಗೌರವಾನ್ವಿತ ಸಲಹಾ ಮ೦ಡಳಿ: ಅನ೦ತ ಪದ್ಮನಾಭ ಪಾಠಕ್, ವಿದುಷಿ ಸುಮ೦ಗಲಾ ರತ್ನಾಕರ್, ರಾಜಗೋಪಾಲ ಕನ್ಯಾನ, ಶಶಿರಾಜ ಸೋಮಯಾಜಿ, ಅವಿನಾಶ್ ಬೈಪಾಡಿತ್ತಾಯ, ಮಹೇಶ್ ಪದ್ಯಾಣ, ನಾರಾಯಣ ಹೆಬ್ಬಾರ್
ಕಾರ್ಯಕಾರಿ ಮಂಡಳಿ: ರವಿ ಮಡೋಡಿ (ಯೋಜನಾಧ್ಯಕ್ಷ), ಡಾ.ಪ್ರದೀಪ್ ಸಾಮಗ (ಯೋಜನಾ ಕಾರ್ಯದರ್ಶಿ), ನಟರಾಜ ಉಪಾಧ್ಯ (ಯೋಜನಾ ಸಹಕಾರ್ಯದರ್ಶಿ), ಹರಿಕೃಷ್ಣ ಹೊಳ್ಳ, ಕಜೆ ಸುಬ್ರಹ್ಮಣ್ಯ ಭಟ್, ಲಾ ನಾ ಭಟ್, ಅಜಿತ್ ಕಾರಂತ್, ಇಟಗಿ ಮಹಾಬಲೇಶ್ವರ ಭಟ್,  ಶ್ರೀಕೃಷ್ಣ ಭಟ್ ಸುಣ್ಣಗೋಳಿ, ವಿದ್ಯಾ ಹೆಗಡೆ ಕವಿತಾಸ್ಫೂರ್ತಿ, ಶಿವಕುಮಾರ ಬಿ. ಅಳಗೋಡು
ಗೌರವಾನ್ವಿತ ಸ್ವಯಂಸೇವಕರು: ಗಣಪತಿ ಭಟ್ ಪಿ,, ವಸುಮತಿ ಜಿ., ಅನಿತಾ ಎಂ. ಜಿ.  ರಾವ್, ರಂಜನ ಭಟ್, ಶಶಿಕಲಾ ಮೂರ್ತಿ, ರಘುರಾಜ್ ಶರ್ಮ, ಚಂದ್ರ ಆಚಾರ್, ಸುಬ್ರಹ್ಮಣ್ಯ ಭಾಗವತ್, ಉಮೇಶ್ ಶಿರೂರು, ವೆಂಕಟೇಶ್ ಹೆಗಡೆ, ವೆಂಕಟೇಶ್ ವೈದ್ಯ, ಕೆ ಗೋವಿಂದ ಭಟ್, ಬೆಂಗಳೂರು, ಸತೀಶ್ ಯಲ್ಲಾಪುರ, ಮಯೂರಿ ಉಪಾದ್ಯಾಯ, ಶ್ರೀಕಾಂತ್ ನಾಯಕ್, ರವಿ ಕಾಮತ್ ಕುಮಟಾ, ರಾಮಕೃಷ್ಣ ಮರಾಠಿ, ಶ್ರೀಕಾ೦ತ್ ನಾಯಕ್, ರಘುರಾಜ್ ಶರ್ಮಾ,
ಸಹಕಾರ:
ಪ್ರಸ೦ಗ ಕವಿಗಳು: ಬಲಿಪ ನಾರಾಯಣ ಭಾಗವತ, ಹೊಸ್ತೋಟ ಮಂಜುನಾಥ ಭಾಗವತ, ಪ್ರೊ. ಎಮ್.. ಹೆಗಡೆ, ಡಾ. ಅಮೃತ ಸೋಮೇಶ್ವರ, ಶ್ರೀಧರ ಡಿ. ಎಸ್., ಎಂ. ಆರ್. ವಾಸುದೇವ ಸಾಮಗ, ಎಂ.ಆರ್. ಲಕ್ಷ್ಮೀನಾರಾಯಣ, ಮಧುಕುಮಾರ್ ಬೋಳೂರು, ಅಗರಿ ಭಾಸ್ಕರ ರಾವ್, ಅಂಬರೀಷ ಭಾರದ್ವಾಜ, ಶಿವಕುಮಾರ ಬಿ. ಅಳಗೋಡು, ದಿನೇಶ ಉಪ್ಪೂರ, ಗಿ೦ಡಿಮನೆ ಮೃತ್ಯು೦ಜಯ, ಇಟಗಿ ಮಹಾಬಲೇಶ್ವರ ಭಟ್ 
ಕವಿಚರಿತ್ರೆ ಮತ್ತು ಪ್ರಸ೦ಗಯಾದಿ: ಡಾ.  ಕಬ್ಬಿನಾಲೆ ವಸಂತ ಭಾರದ್ವಾಜ, ಡಾ. ಪಾದೇಕಲ್ಲು ವಿಷ್ಣುಭಟ್
ಸ೦ಸ್ಥೆಗಳು:  ಕರ್ನಾಟಕ ಯಕ್ಷಗಾನ ಅಕಾಡೆಮಿ & ಕನ್ನಡ ಮತ್ತು ಸಂಸ್ಕೃತಿ ಇಲಾಖೆ  (ಕರ್ನಾಟಕ ಸರ್ಕಾರ), ಯಕ್ಷಗಾನ ಕಲಾರ೦ಗ, ಉಡುಪಿ
ಪ್ರಸ೦ಗ ಪುಸ್ತಕ ಒದಗಣೆ ಮತ್ತಿತರ: ಡಾ. ರಾಧಾಕೃಷ್ಣ ಉರಾಳ್, ಅಗರಿ ಭಾಸ್ಕರ ರಾವ್ , ಗೋಪಾಲಕೃಷ್ಣ ಭಾಗವತ್,  ಶ್ರೀಪಾದಗದ್ದೆ, ಮುರಳಿ ಶ್ರೇಣಿ, ಅನಂತ ದಂತಳಿಕೆ, ಗುರುನಂದನ್ ಹೊಸೂರು, ನಾರಾಯಣ ಶಾನುಭಾಗ, ನಾರಾಯಣ ಯಾಜಿ, ಶೇಷಗಿರಿಯಪ್ಪ, ಎಸ್ ಎಮ್ ಹೆಗಡೆ, ದಿವಾಕರ ಹೆಗಡೆ, ನಿತ್ಯಾನಂದ ಹೆಗಡೆ ಮೂರೂರು, ಶ್ರೀನಿಧಿ ಡಿ.ಎಸ್, ರವೀಂದ್ರ ಐತುಮನೆ, ಗುರುರಾಜ ಹೊಳ್ಳ ಬಾಯಾರು, ಸುರೇಶ್ ಹೆಗಡೆ ಬೆಳಸಲಿಗೆ, ಮನೋಹರ ಕು೦ದರ್, ನ೦ದಳಿಕೆ ಬಾಲಚ೦ದ್ರ ರಾವ್, ರಘುರಾಮ್ ಮುಳಿಯ, ಸುಧಾ ಕಿರಣ್ ಅಧಿಕಶ್ರೇಣಿ, ಮಹಾಬಲಮೂರ್ತಿ ಕೊಡ್ಲೆಕೆರೆ, ಎ. ಎನ್. ಹೆಗಡೆ, ಮುರಳೀಧರ ಉಪಾಧ್ಯ
ಯಕ್ಷವಾಹಿನಿ ಸ೦ಸ್ಥೆ
ಗೌರವಾನ್ವಿತ ಸಲಹಾ ಮ೦ಡಳಿ: ಮಲ್ಪೆ ಲಕ್ಷ್ಮೀನಾರಾಯಣ ಸಾಮಗ (ಗೌರವಾಧ್ಯಕ್ಷರು), ಡಿ. ಎಸ್. ಶ್ರೀಧರ, ಗಿ೦ಡಿಮನೆ ಮೃತ್ಯು೦ಜಯ, ದಿನೇಶ ಉಪ್ಪೂರ, ಡಾ. ಪ್ರದೀಪ ಸಾಮಗ, ರಾಜಗೋಪಾಲ ಕನ್ಯಾನ, ಶಶಿರಾಜ ಸೋಮಯಾಜಿ, ಅನ೦ತ ಪದ್ಮನಾಭ ಪಾಠಕ್, ವಿದುಷಿ ಸುಮ೦ಗಲಾ ರತ್ನಾಕರ್, ಹರಿಕೃಷ್ಣ ಹೊಳ್ಳ, ಕಜೆ ಸುಬ್ರಹ್ಮಣ್ಯ ಭಟ್, ಲಾ ನಾ ಭಟ್, ರಾಘವೇ೦ದ್ರ ಮೈಯ್ಯ (ಲೆಕ್ಕಪತ್ರ ಪರಿಶೋಧಕರು) 
ವಿಶ್ವಸ್ಥ ಮ೦ಡಳಿ ಮತ್ತು ಕಾರ್ಯಕಾರಿ ಮ೦ಡಳಿ: ಡಾ. ಆನ೦ದರಾಮ ಉಪಾಧ್ಯ (ಅಧ್ಯಕ್ಷ), ನಟರಾಜ ಉಪಾಧ್ಯ (ಕಾರ್ಯದರ್ಶಿ), ರವಿ ಮಡೋಡಿ (ಖಜಾ೦ಚಿ)
ಆರ್ಥಿಕ ಸಹಾಯ: ಅಶೋಕ್ ಕೊಡ್ಲಾಡಿ, ಗಿ೦ಡಿಮನೆ ಮೃತ್ಯು೦ಜಯ, ನಟರಾಜ ಉಪಾಧ್ಯ
ಪುಸ್ತಕ ಸಹಾಯ: ವಿದುಷಿ ಸುಮ೦ಗಲ ರತ್ನಾಕರ್, ಮ೦ಟಪ ಪ್ರಭಾಕರ ಉಪಾಧ್ಯ, ಡಾ. ಆನ೦ದರಾಮ ಉಪಾಧ್ಯ, ಗಿ೦ಡಿಮನೆ ಮೃತ್ಯು೦ಜಯ, ನಟರಾಜ ಉಪಾಧ್ಯ 

No comments:

Post a Comment

ಯಕ್ಷಪ್ರಸಂಗಕೋಶದಲ್ಲಿ ಡಿಜಿಟಲೀಕರಣಗೊಂಡ ಒಟ್ಟು ಪ್ರಸಂಗಗಳ ಸಂಖ್ಯೆ ೨೫೫!

  ಯಕ್ಷಪ್ರೇಮಿಗಳೇ, ಯಕ್ಷಸಾಹಿತ್ಯದ ಡಿಜಿಟಲೀಕರಣ ಯೋಜನೆಯಾದ ಯಕ್ಷಪ್ರಸಂಗಕೋಶಕ್ಕೆ ೧೮ನೇ ಹಂತದಲ್ಲಿ ೧೫ ಪ್ರಸಂಗಗಳು ಅಂತರಜಾಲ ಪ್ರತಿಗಳಾಗಿ ಲೋಕಾರ್ಪಣೆಯಾಗುವ ಮೂಲಕ ಈವರೆಗೆ...