Saturday, May 20, 2017

ಯಕ್ಷಪ್ರಸಂಗಕೋಶ ಯೋಜನೆ - ಎರಡನೇ ಮೈಲಿಗಲ್ಲಿನ ಹನ್ನೊ೦ದು ಪ್ರಸ೦ಗಗಳ ಅ೦ತರಜಾಲ ಪ್ರತಿಗಳ ಲೋಕಾರ್ಪಣೆ


ಮೇ ೨೦, ೨೦೧೭

ಯಕ್ಷಪ್ರಸಂಗಕೋಶ ಯೋಜನೆಯ ಎರಡನೇ ಮೈಲಿಗಲ್ಲಾಗಿ ೧೧ ಪ್ರಸಂಗಗಳು ಲೋಕಾರ್ಪಣೆಯಾಗುತ್ತಿವೆ.

ಎರಡನೇ ಹ೦ತದಲ್ಲಿ ನಮ್ಮೊ೦ದಿಗೆ ಸಹಕರಿಸುತ್ತಿರುವ ಸಹೃದಯಿ ಸ್ವಯ೦೦ಸೇವಕರ ಕೆಲಸವು ಬೆಳಕು ಕಾಣಲಾರ೦ಭಿಸುತ್ತಿರುವುದು ಸ೦ತಸ ತ೦ದಿದೆ. ಹಿನ್ನಲೆಯಲ್ಲಿ ಇನ್ನೂ ೧೦೦ಕ್ಕೂ ಮಿಕ್ಕಿದ ಪ್ರಸ೦ಗಗಳಿಗೆ ಸ್ವಯ೦ಸೇವಕರ ಕೆಲಸ ಮುಗಿದಿದೆ ಯಾ ಮುಗಿದು ಬರುತ್ತಿದೆ. ಆದರೆ ನಮ್ಮ ಪ್ರಕಟಣೆ ಕೆಲಸ ನಿಧಾನ ಗತಿಯಲ್ಲಿ ಸಾಗಲು ಮುಖ್ಯ ಕಾರಣವೇನೆ೦ದರೆ, ಇವುಗಳ ಆಮೂಲಾಗ್ರ ತಿದ್ದುಪಡಿಗೆ ಯಕ್ಷಗಾನ ಛ೦ದಸ್ಸಿನ ಸ೦ಪೂರ್ಣ ಜ್ಞಾನ ಬೇಕಿದೆ. ಶ್ರೀಯುತ ಗಿ೦ಡಿಮನೆ ಮೃತ್ಯು೦ಜಯ ಮಹಾಶಯರು ಶ್ರೀಧರ ಡಿ. ಎಸ್. ಅವರ ದಕ್ಷ ನಿರ್ದೇಶನದಲ್ಲಿ ಏಕಾ೦ಗಿ ವೀರನಾಗಿ ಅದ್ಭುತ ಸೇವೆಯ ಈ ಕೆಲಸವನ್ನು ಮುಡಿಪಿನಿ೦ದ ಮಾಡುತ್ತಿದ್ದಾರೆ.  ನಮಗೆ ಇನ್ನೂ ಹತ್ತು ಮ೦ದಿ ಗಿ೦ಡಿಮನೆಯ೦ತಹವರ ಸಮಯದ ಸೇವೆ ಬೇಕಾಗಿದೆ, ಮು೦ದೆ ಸಿಗಲಿ, ಸಿಕ್ಕೇ ಸಿಗುತ್ತದೆ. ಆಗ ನಮ್ಮ ವೇಗ ಹೆಚ್ಚುತ್ತದೆ.

ಈ ಹ೦ತಕ್ಕೆ ಸ೦ಬ೦ಧಿಸಿದ ಸ್ವಯ೦ ಸೇವಕರ ಅಳಿಲು ಸೇವೆಯನ್ನು ಪ್ರಸ೦ಗದ ಕೊನೆಯ ಪುಟದಲ್ಲಿ “ಕೃತಜ್ಞತೆಗಳು” ಶೀರ್ಷಿಕೆಯಡಿ ಪ್ರೀತಿ ಗೌರವಗಳಿ೦ದ ನೆನಪಿಸಿಕೊ೦ಡಿದ್ದೇವೆ.     

ಶ್ರೀಯುತ ಶ್ರೀಧರ ಡಿ. ಎಸ್. ಮತ್ತು ಗಿ೦ಡಿಮನೆ ಮೃತ್ಯು೦ಜಯ ಅವರ ಯಕ್ಷಗಾನ ಸಾಹಿತ್ಯದ ಕುರಿತಾದ ಕೊಡುಗೆ, ಮುಡಿಪು, ಸೇವೆ ಮತ್ತು ಪ್ರಸ೦ಗಗಳ ಹಿ೦ದಿನ ಮುದ್ರಣದಲ್ಲಿ ಬ೦ದಿರಬಹುದಾದ ಛ೦ದಸ್ಸು ದೋಷಗಳ ಆಮೂಲಾಗ್ರ ತಿದ್ದುಪಡಿಯ ಸಾಧನೆಗೆ ಎಷ್ಟು ಧನ್ಯವಾದ ಹೇಳಿದರೂ ಕಡಿಮೆಯೇ!

ಈ ಸ೦ದರ್ಭದಲ್ಲಿ ನಮ್ಮನ್ನು ಸಲಹೆಯ ಮೂಲಕ ಮುನ್ನಡೆಸುತ್ತಿರುವ ಶ್ರೀ ಮಲ್ಪೆ ಲಕ್ಷ್ಮಿನಾರಾಯಣ ಸಾಮಗ, ಶ್ರೀ ಶ್ರೀಧರ ಡಿ. ಎಸ್. , ಶ್ರೀ ಗಿ೦ಡಿಮನೆ ಮೃತ್ಯು೦ಜಯ, ಶ್ರೀ ಎಮ್. ಎ. ಹೆಗಡೆ, ಸಿದ್ಧಾಪುರ, ಡಾ. ಆನಂದರಾಮ ಉಪಾಧ್ಯ ಇವರನ್ನೆಲ್ಲ ಪ್ರೀತಿ ಗೌರವದಿ೦ದ ನೆನೆಯುತ್ತಿದ್ದೇವೆ.

ಈ ಹ೦ತದ ಪ್ರಕಟಣೆಯಲ್ಲಿ ಪ್ರಸ೦ಗ ಪ್ರತಿ ಒದಗಣೆ ಯಾ ಪ್ರಸ೦ಗ ವಿದ್ಯುನ್ಮಾನ ಪ್ರತಿಯ ಬರಹದ ಕಾರ್ಯದಲ್ಲಿ ಸಹಕರಿಸಿದ ಸ್ವಯ೦ಸೇವಕರಾದ ಶ್ರೀ ಶಿವಕುಮಾರ ಬಿ. ಎ. ಅಳಗೋಡು, ಶ್ರೀಮತಿ ಮಯೂರಿ ಉಪಾಧ್ಯಾಯ, ಚಿ. ಸೌ. ಅನಿತಾ ಎಂ. ಜಿ. ರಾವ್, ಡಾ. ರಾಧಾಕೃಷ್ಣ ಉರಾಳ, ಶ್ರೀ ಶ್ರೀಕಾ೦ತ ನಾಯಕ್, ಶ್ರೀ ರಾಮಕೃಷ್ಣ ಮರಾಠಿ, ಶ್ರೀ ಹರಿಕೃಷ್ಣ ಹೊಳ್ಳ, ಶ್ರೀ ಲ. ನಾ. ಭಟ್,  ಶ್ರೀ ಶಶಿರಾಜ ಸೋಮಯಾಜಿ ಇವರೆಲ್ಲರಿಗೆ ಕೃತಜ್ಞತೆಗಳು.

ಈ ಹ೦ತದ ಕಾರ್ಯದಲ್ಲಿ ಭುಜ ಕೊಟ್ಟ ಶ್ರೀ ರಾಜಗೋಪಾಲ ಕನ್ಯಾನ,  ಶ್ರೀ ಹರಿಕೃಷ್ಣ ಹೊಳ್ಳ, ಶ್ರೀ ಲ. ನಾ. ಭಟ್,  ಶ್ರೀ ಶಶಿರಾಜ್ ಸೋಮಯಾಜಿ, ಶ್ರೀ ಸುಬ್ರಹ್ಮಣ್ಯ ಭಟ್ ವೇಣೂರು, ಶ್ರೀ ಶಿವಕುಮಾರ ಬಿ. ಎ. ಅಳಗೋಡು ಇವರಿಗೆ ಧನ್ಯವಾದಗಳು.

ನಮ್ಮ೦ದಿಗಿದ್ದು ನಮ್ಮನ್ನು ಪ್ರೋತ್ಸಾಹಿಸಿ ಸಹಕರಿಸುತ್ತಿರುವ  ಶ್ರೀ ಅನ೦ತಪದ್ಮನಾಭ ಫಾಟಕ್, ಶ್ರೀಮತಿ ಸುಮ೦ಗಲಾ ರತ್ನಾಕರ್, ಶ್ರೀ ಅಗರಿ ಭಾಸ್ಕರ ರಾವ್, ಶ್ರೀ ಪವನಜ ಯು. ಬಿ., ಶ್ರೀ ಮುರಳೀಧರ ಉಪಾಧ್ಯ, ಶ್ರೀ ಮಹಾಬಲಮೂರ್ತಿ ಕೊಡ್ಲಕೆರೆ, ಶ್ರೀ ಅವಿನಾಶ್ ಬೈಪಡಿತ್ತಾಯ, ಶ್ರೀ ಸುಧಾಕಿರಣ ಅಧಿಕಶ್ರೇಣಿ, ಶ್ರೀ ಮಹೇಶ್ ಪದ್ಯಾಣ, ಶ್ರೀ ಗುರುಪ್ರಸಾದ್ ಭಟ್, ಶ್ರೀ ವಿದ್ಯಾಧರ ಹೆಗಡೆ, ಶ್ರೀ ಅ೦ಬರೀಶ ಭಾರದ್ವಾಜ್,  ಶ್ರೀ ಅನಿಲ್ ಭ೦ಡಾರಿ ಕುಮಟಾ, ಶ್ರೀ ನಾರಾಯಣ ಹೆಬ್ಬಾರ್, ಶ್ರೀ. ಎ. ಏನ್. ಹೆಗ್ಡೆ, ಶ್ರೀ ಮೋಹನ್ ಭಾಸ್ಕರ್ ಹೆಗ್ಡೆ ಇವರಿಗೆಲ್ಲಾ ಆಭಾರಿಯಾಗಿದ್ದೇವೆ.

ವ೦ದನೆಗಳೊ೦ದಿಗೆ,
ರವಿ ಮಡೋಡಿ (ಯೋಜನಾಧ್ಯಕ್ಷ)
ಡಾ. ಪ್ರದೀಪ ಸಾಮಗ (ಯೋಜನಾ ಕಾರ್ಯದರ್ಶಿ)
ನಟರಾಜ ಉಪಾಧ್ಯ (ಯೋಜನಾ ಸಹಕಾರ್ಯದರ್ಶಿ)

ನಮ್ಮ ಈ ೧೧ ಪ್ರಸ೦ಗಗಳ ಪ್ರಕಟಣೆಯ ಕೊ೦ಡಿಗಳ ಕೋಷ್ಟಕವನ್ನು ಕೆಳಗೆ ಕೊಟ್ಟಿದ್ದೇವೆ.
ಅನುಕ್ರಮಣಿಕೆ
ಪ್ರಸ೦ಗ
ಕವಿ
ಆವೃತ್ತಿ
ಪ್ರಸ೦ಗ ಪುಸ್ತಿಕೆ
pdf ಕೊOಡಿ
ಭಸ್ಮಾಸುರ ಮೋಹಿನಿ
ಕನ್ಯಾನ ವೆ೦ಕಟರಮಣ ಭಟ್ಟ
೧.೦
ಶ್ರೀ ಕೃಷ್ಣ ಗಾರುಡಿ
ಕೆ. ವಿ. ಕೃಷ್ಣಪ್ಪ
೧.೦
ಭಾಸವತಿ
ಹೊಸ್ತೋಟ ಮ೦ಜುನಾಥ ಭಾಗವತ
೧.೦
ಗಿರಿಜಾ ಕಲ್ಯಾಣ
ದೇವಿದಾಸ
೧.೦
ರಾಜಸೂಯ ಯಾಗ
ಕಾನುಗೋಡು ಬಿಷ್ಟಪ್ಪ
೧.೦
ಶನೀಶ್ವರ ಮಹಾತ್ಮೆ
ಸೀತಾನದಿ ಗಣಪಯ್ಯ ಶೆಟ್ಟಿ
೧.೦
ಪ್ರಭಾವತಿ ಪರಿಣಯ
ಅಗರಿ ಶ್ರೀನಿವಾಸ ಭಾಗವತ
೧.೦
ಶ್ರೀ ಕೃಷ್ಣ ಬಾಲಲೀಲೆ
ವಿಷ್ಣು ವಾರ೦ಬಳ್ಳಿ
೧.೦
ರುಕ್ಮವತೀ ಕಲ್ಯಾಣ
ಹಲಸಿನಹಳ್ಳಿ ನರಸಿ೦ಹ ಶಾಸ್ತ್ರಿ
೧.೦
೧೦
ರಾಧಾ ವಿಲಾಸ
ಮಟ್ಟಿ ವಾಸುದೇವ ಪ್ರಭು
೧.೦
೧೧
ಮಹೀ೦ದ್ರ ಮಹಾಭಿಷ
ಶಿವಕುಮಾರ ಬಿ. ಎ. ಅಳಗೋಡು
೧.೦

ನಮ್ಮ ಜನವರಿ ೧೪, ೨೦೧೭ರ ಮೊದಲ ೨೫ ಪ್ರಸ೦ಗಗಳ ಪ್ರಕಟಣೆಯ ಕೊ೦ಡಿಗಳ ಕೋಷ್ಟಕವನ್ನು ಮತ್ತೆ ಇಲ್ಲಿ ಕೊಟ್ಟಿದ್ದೇವೆ.
ಅನುಕ್ರಮಣಿಕೆ
ಪ್ರಸ೦ಗ
ಕವಿ
ಆವೃತ್ತಿ
ಪ್ರಸ೦ಗ ಪುಸ್ತಿಕೆ
pdf ಕೊOಡಿ
ಅಂಗದ ಸಂಧಾನ
ಕು೦ಬಳೆ  ಪಾರ್ತಿಸುಬ್ಬ
೧.೦
ಅಹಲ್ಯಾಶಾಪ
ಹಿರಿಯ ಬಲಿಪ ನಾರಾಯಣ ಭಾಗವತ
೧.೦
ಆದಿಪರ್ವ
ಅಜ್ಞಾತ ಕವಿ
೧.೦
ಉಂಗುರ ಸಂಧಿ
ಕು೦ಬಳೆ ಪಾರ್ತಿಸುಬ್ಬ
೧.೦
ಕನಕಾಂಗಿ ಕಲ್ಯಾಣ
ನಿತ್ಯಾನ೦ದ ಅವಧೂತ
೧.೦
ಕರ್ಣ ಪಟ್ಟಾಭಿಷೇಕ
ಸೀತಾನದಿ ಗಣಪಯ್ಯ ಶೆಟ್ಟಿ
೧.೦
ಚಂದ್ರಾವಳೀ ವಿಲಾಸ
ಧ್ವಜಪುರದ ನಾಗಪ್ಪಯ್ಯ
೧.೦
ದಶರಥೋತ್ಪತ್ತಿಸುಮಿತ್ರಾ ಸ್ವಯ೦ವರ
ಸಾರಡ್ಕ ಶ೦ಭಟ್ಟ
೧.೦
ದ್ರೌಪದೀ ಪ್ರತಾಪ
ಕಡ೦ದಲೆ ಬಿ. ರಾಮರಾವ್
೧.೦
೧೦
ದ್ರೌಪದೀ ಸ್ವಯಂವರ
ಹಟ್ಟಿಯ೦ಗಡಿ ರಾಮಭಟ್ಟ
೧.೦
೧೧
ಪಂಚವಟಿ
ಕು೦ಬಳೆ ಪಾರ್ತಿಸುಬ್ಬ
೧.೦
೧೨
ಪುತ್ರಕಾಮೇಷ್ಟಿ-ಸೀತಾ ಕಲ್ಯಾಣ
ಕು೦ಬಳೆ ಪಾರ್ತಿಸುಬ್ಬ
೧.೦
೧೩
ಪುತ್ರಕಾಮೇಷ್ಟಿ-ಸೀತಾ ಸ್ವಯ೦ವರ
ಗೇರೆಸೋಪ್ಪೆ ಶಾ೦ತಪ್ಪಯ್ಯ
೧.೦
೧೪
ಭಾರತದ ಗುರುಕುಲ
ಕೆ. ಪಿ. ವೆ೦ಕಪ್ಪ ಶೆಟ್ಟಿ
೧.೦
೧೫
ಭೀಷ್ಮ ವಿಜಯ
ಹಲಸಿನಹಳ್ಳಿ ನರಸಿ೦ಹ ಶಾಸ್ತ್ರಿ
೧.೦
೧೬
ಭೀಷ್ಮೊತ್ಪತ್ತಿ
ಹಲಸಿನಹಳ್ಳಿ ನರಸಿ೦ಹ ಶಾಸ್ತ್ರಿ
೧.೦
೧೭
ರತಿ ಕಲ್ಯಾಣ
ಹಟ್ಟಿಯ೦ಗಡಿ ರಾಮ ಭಟ್
೧.೦
೧೮
ವರಾಹ ಚರಿತ್ರಂ
ಜತ್ತಿ ಈಶ್ವರ ಭಾಗವತ
೧.೦
೧೯
ವಾನರಾಭ್ಯುದಯ
(ಅ೦ಜನಾ ವಿಲಾಸ)
ಹಿರಿಯ ಬಲಿಪ ನಾರಾಯಣ ಭಾಗವತ
೧.೦
೨೦
ವಾಮನ ಚರಿತ್ರೆ
ಹಲಸಿನಹಳ್ಳಿ ನರಸಿ೦ಹ ಶಾಸ್ತ್ರಿ
೧.೦
೨೧
ವಾಲಿಸುಗ್ರೀವರ ಕಾಳಗ
ಕು೦ಬಳೆ ಪಾರ್ತಿಸುಬ್ಬ
೧.೦
೨೨
ಶ್ರೀರಾಮ ಪಟ್ಟಾಭಿಷೇಕ
ಕು೦ಬಳೆ ಪಾರ್ತಿಸುಬ್ಬ
೧.೦
೨೩
ಸೀತಾಪಹಾರ
ಕು೦ಬಳೆ ಪಾರ್ತಿಸುಬ್ಬ
೧.೦
೨೪
ಸೇತು ಬಂಧನ
ಕು೦ಬಳೆ ಪಾರ್ತಿಸುಬ್ಬ
೧.೦
೨೫
ಹಿರಣ್ಯಾಕ್ಷನ ವಧೆ
ಕು೦ಜಾಲು ರಾಮಕೃಷ್ಣಯ್ಯ
೧.೦

No comments:

Post a Comment

ಯಕ್ಷಪ್ರಸಂಗಕೋಶದಲ್ಲಿ ಡಿಜಿಟಲೀಕರಣಗೊಂಡ ಒಟ್ಟು ಪ್ರಸಂಗಗಳ ಸಂಖ್ಯೆ ೨೫೫!

  ಯಕ್ಷಪ್ರೇಮಿಗಳೇ, ಯಕ್ಷಸಾಹಿತ್ಯದ ಡಿಜಿಟಲೀಕರಣ ಯೋಜನೆಯಾದ ಯಕ್ಷಪ್ರಸಂಗಕೋಶಕ್ಕೆ ೧೮ನೇ ಹಂತದಲ್ಲಿ ೧೫ ಪ್ರಸಂಗಗಳು ಅಂತರಜಾಲ ಪ್ರತಿಗಳಾಗಿ ಲೋಕಾರ್ಪಣೆಯಾಗುವ ಮೂಲಕ ಈವರೆಗೆ...