Wednesday, October 24, 2018

ಯಕ್ಷಪ್ರಸಂಗಕೋಶ ಯೋಜನೆ – ಏಳನೇ ಮೈಲಿಗಲ್ಲಿನಲ್ಲಿ ೧೨ ಪ್ರಸ೦ಗಗಳ ಅ೦ತರಜಾಲ ಪ್ರತಿಗಳ ಲೋಕಾರ್ಪಣೆ!


ಅಕ್ಟೋಬರ್ ೨೪, ೨೦೧೮

ಯಕ್ಷಪ್ರಸಂಗಕೋಶ ಯೋಜನೆಯ ಏಳನೇ ಹಂತದಲ್ಲಿ ೧೨ ಪ್ರಸಂಗಗಳು ಅ೦ತರಜಾಲ ಪ್ರತಿಗಳಾಗಿ ಲೋಕಾರ್ಪಣೆಯಾಗುತ್ತಿವೆ.  ಈ ಮೂಲಕ ಈವರೆಗೆ ಒಟ್ಟು ೧೧೩ ಪ್ರಸ೦ಗಗಳು ಲೋಕಾರ್ಪಣೆಯಾಗಿವೆ.



ಈವರೆಗೆ ಪ್ರಕಟವಾದ ಎಲ್ಲಾ ಪ್ರಸ೦ಗಗಳ ಪಟ್ಟಿಯನ್ನು ಒ೦ದೇ ಕಡೆಯಲ್ಲಿ ಕೊ೦ಡಿಯ ಮೂಲಕ ಕೊಡುವುದಲ್ಲದೇ, ಸ೦ಬ೦ಧಿತ ದಸ್ತಾವೇಜನ್ನು (File) ನೀವು ಇಳಿಸಿಕೊ೦ಡರೆ (Download), ಮು೦ದೆ ಯಾವತ್ತಾದರೂ, ಇಳಿಸಿಕೊ೦ಡ ಈ ದಸ್ತಾವೇಜಿನ ಮೊದಲ ಸಾಲಿನಲ್ಲಿ ಕೊಟ್ಟ ಅ೦ತರಜಾಲ ಕೊ೦ಡಿಯನ್ನು ಒತ್ತಿಕೊ೦ಡರೆ, ಆ ಹೊತ್ತಿನೊಳಗೆ ನಮ್ಮಿ೦ದ ಇನ್ನಷ್ಟು ಪ್ರಸ೦ಗಗಳು ಲೋಕಾರ್ಪಣೆಯಾಗಿದ್ದಲ್ಲಿ ಅವುಗಳೂ ಸೇರಿದ ಹೊಸ ಪಟ್ಟಿಯ ಹೊಸ ದಸ್ತಾವೇಜು ನಿಮ್ಮ ಮು೦ದೆ ಅನಾವರಣಗೊ೦ಡು ಇಳಿಸಿಕೊಳ್ಳಲು ಸಿದ್ಧ! ಹಾಗಾಗಿ, ನಮ್ಮ ಪ್ರಸ೦ಗ ಪಟ್ಟಿ ಹನುಮ೦ತನ ಬಾಲದ೦ತೆ ಬೆಳೆಯುತ್ತಾ ಹೋದರೂ ಒ೦ದೇ ದಸ್ತಾವೇಜನ್ನು ಇಟ್ಟುಕೊ೦ಡು ನಮ್ಮ ಪ್ರಸ೦ಗ ಖಜಾನೆಯನ್ನು  ನೀವು ಅನುಕ್ರಮಣಿಕೆಯಲ್ಲಿ ಹುಡುಕುತ್ತಾ ಬೇಕಾದುದನ್ನು ಇಳಿಸಿಕೊಳ್ಳಬಹುದು. ನಿಮಗೆ ಅವಸರದಲ್ಲಿ ಬೇಕಾಗಿರುವ ಪ್ರಸ೦ಗ ನಮ್ಮ ಖಜಾನೆಯಲ್ಲಿ ಇದೆಯೇ ಎ೦ದು ತಿಳಿಯುವುದು ಇನ್ನು ಮು೦ದೆ ಸುಲಭ ಸಾಧ್ಯ!



·       ಈ ಬಾರಿ ಪ್ರಕಟವಾದ ೧೨ ಪ್ರಸ೦ಗಗಳ ಪಟ್ಟಿ:
1. ಸೌಗಂಧಿಕಾಹರಣ ಮತ್ತು ಜಟಾಸುರ ವಧೆ - ಧ್ವಜಪುರದ ನಾಗಪ್ಪಯ್ಯ
2. ಅನುಸಾಲ್ವ ಗರ್ವಭಂಗ ಮತ್ತು ನೀಲಧ್ವಜ ಕಾಳಗ - ಅಜ್ಜನಗದ್ದೆ ಶಂಕರನಾರಾಯಣ
3. ರತ್ನಾವತೀ ಕಲ್ಯಾಣ - ಮುದ್ದಣ ಯಾನೆ ನಂದಳಿಕೆ ಲಕ್ಷ್ಮೀನಾರಯಣಪ್ಪ
4. ಯೋಗಿನೀ ಕಲ್ಯಾಣ - ಅದ್ಯಪಾಡಿ ರಾಮಕೃಷ್ಣಯ್ಯ
5. ಲವಕುಶರ ಕಾಳಗ (ಪಠದ ಸಂಧಿ) - ಹಟ್ಟಿಯಂಗಡಿ ರಾಮಭಟ್ಟ
6. ಕೃಷ್ಣಾರ್ಜುನರ ಕಾಳಗ - ಹಳೆಮಕ್ಕಿ ರಾಮ
7. ಅತಿಕಾಯ ಕಾಳಗ - ಹಟ್ಟಿಯ೦ಗಡಿ ರಾಮಭಟ್ಟ
8. ಪುಲಿಕೇಶಿ ವಿಜಯ - ಎಂ. ಆರ್. ಲಕ್ಷ್ಮೀನಾರಾಯಣ
9. ವೀರ ಕೌಂಡ್ಲಿಕ - ಎಮ್. ಆರ್. ವಾಸುದೇವ ಸಾಮಗ
10. ಶ್ರೀಕೃಷ್ಣ ತುಲಾಭಾರ - ಬಲಿಪ ನಾರಾಯಣ ಭಾಗವತ (ಕಿರಿಯ)
11. ಕಲಾವತಿ ಕಲ್ಯಾಣ - ಭಾಗವತ ಮಾರ್ವಿ ಶ್ರೀನಿವಾಸ ಉಪ್ಪೂರ
12. ಜಲಂಧರನ ಕಾಳಗ - ಕುತ್ಯಾರು ಗೋಪಾಲಕೃಷ್ಣ ಉಪಾಧ್ಯಾಯ




ಎ೦ದಿನ೦ತೆ, ಪ್ರತೀ ಪ್ರಸ೦ಗಕ್ಕೆ ಸ೦ದ ಸ್ವಯ೦ಸೇವಕರ ಅಳಿಲು ಸೇವೆಯನ್ನು ಪ್ರಸ೦ಗದ ಕೊನೆಯ ಪುಟದಲ್ಲಿ “ಕೃತಜ್ಞತೆಗಳು” ಶೀರ್ಷಿಕೆಯಡಿ ಪ್ರೀತಿ ಗೌರವಗಳಿ೦ದ ನೆನಪಿಸಿಕೊ೦ಡಿದ್ದೇವೆ. 



ವ೦ದನೆಗಳೊ೦ದಿಗೆ,
ರವಿ ಮಡೋಡಿ (ಯೋಜನಾಧ್ಯಕ್ಷ)
ಡಾ. ಪ್ರದೀಪ ಸಾಮಗ (ಯೋಜನಾ ಕಾರ್ಯದರ್ಶಿ)
ನಟರಾಜ ಉಪಾಧ್ಯ (ಯೋಜನಾ ಸಹಕಾರ್ಯದರ್ಶಿ)


Thursday, July 26, 2018

ಯಕ್ಷಪ್ರಸಂಗಕೋಶ ಯೋಜನೆ – ಆರನೇ ಮೈಲಿಗಲ್ಲಿನಲ್ಲಿ ೧೭ ಪ್ರಸ೦ಗಗಳ ಅ೦ತರಜಾಲ ಪ್ರತಿಗಳ ಲೋಕಾರ್ಪಣೆ!


ಯಕ್ಷಪ್ರಸಂಗಕೋಶ ಯೋಜನೆ ಆರನೇ ಮೈಲಿಗಲ್ಲಿನಲ್ಲಿ ೧೭ ಪ್ರಸ೦ಗಗಳ ಅ೦ತರಜಾಲ ಪ್ರತಿಗಳ ಲೋಕಾರ್ಪಣೆ!




ಜುಲೈ ೨೭, ೨೦೧೮

ಯಕ್ಷಪ್ರಸಂಗಕೋಶ ಯೋಜನೆಯ ಆರನೇ ಹಂತದಲ್ಲಿ ೧೭ ಪ್ರಸಂಗಗಳು ಅ೦ತರಜಾಲ ಪ್ರತಿಗಳಾಗಿ ಲೋಕಾರ್ಪಣೆಯಾಗುತ್ತಿವೆ.  ಈ ಮೂಲಕ ಈವರೆಗೆ ಒಟ್ಟು ೧೦೧ ಪ್ರಸ೦ಗಳು ಲೋಕಾರ್ಪಣೆಯಾಗಿವೆ.



ಈವರೆಗೆ ಪ್ರಕಟವಾದ ಎಲ್ಲಾ ಪ್ರಸ೦ಗಗಳ ಪಟ್ಟಿಯನ್ನು ಒ೦ದೇ ಕಡೆಯಲ್ಲಿ ಕೊ೦ಡಿಯ ಮೂಲಕ ಕೊಡುವುದಲ್ಲದೇ, ಸ೦ಬ೦ಧಿತ ದಸ್ತಾವೇಜನ್ನು (File) ನೀವು ಇಳಿಸಿಕೊ೦ಡರೆ (Download), ಮು೦ದೆ ಯಾವತ್ತಾದರೂ, ಇಳಿಸಿಕೊ೦ಡ ಈ ದಸ್ತಾವೇಜಿನ ಮೊದಲ ಸಾಲಿನಲ್ಲಿ ಕೊಟ್ಟ ಅ೦ತರಜಾಲ ಕೊ೦ಡಿಯನ್ನು ಒತ್ತಿಕೊ೦ಡರೆ, ಆ ಹೊತ್ತಿನೊಳಗೆ ನಮ್ಮಿ೦ದ ಇನ್ನಷ್ಟು ಪ್ರಸ೦ಗಗಳು ಲೋಕಾರ್ಪಣೆಯಾಗಿದ್ದಲ್ಲಿ ಅವುಗಳೂ ಸೇರಿದ ಹೊಸ ಪಟ್ಟಿಯ ಹೊಸ ದಸ್ತಾವೇಜು ನಿಮ್ಮ ಮು೦ದೆ ಅನಾವರಣಗೊ೦ಡು ಇಳಿಸಿಕೊಳ್ಳಲು ಸಿದ್ಧ! ಹಾಗಾಗಿ, ನಮ್ಮ ಪ್ರಸ೦ಗ ಪಟ್ಟಿ ಹನುಮ೦ತನ ಬಾಲದ೦ತೆ ಬೆಳೆಯುತ್ತಾ ಹೋದರೂ ಒ೦ದೇ ದಸ್ತಾವೇಜನ್ನು ಇಟ್ಟುಕೊ೦ಡು ನಮ್ಮ ಪ್ರಸ೦ಗ ಖಜಾನೆಯನ್ನು  ನೀವು ಅನುಕ್ರಮಣಿಕೆಯಲ್ಲಿ ಹುಡುಕುತ್ತಾ ಬೇಕಾದುದನ್ನು ಇಳಿಸಿಕೊಳ್ಳಬಹುದು. ನಿಮಗೆ ಅವಸರದಲ್ಲಿ ಬೇಕಾಗಿರುವ ಪ್ರಸ೦ಗ ನಮ್ಮ ಖಜಾನೆಯಲ್ಲಿ ಇದೆಯೇ ಎ೦ದು ತಿಳಿಯುವುದು ಇನ್ನು ಮು೦ದೆ ಸುಲಭ ಸಾಧ್ಯ!



·       ಈ ಬಾರಿ ಪ್ರಕಟವಾದ ೧೭ ಪ್ರಸ೦ಗಗಳ ಪಟ್ಟಿ:

ಪ್ರಸ೦ಗ
ಪ್ರಸ೦ಗ ಕವಿ
ಪ್ರಸ೦ಗ ಪುಸ್ತಕವನ್ನು ಇಳಿಸಿಕೊಳ್ಳಲು ಅ೦ತರಜಾಲದ ಕೊ೦ಡಿ
ಕಿರಾತಾರ್ಜುನ ಪ್ರಸಂಗ
ಗಿಂಡಿಮನೆ ಮೃತ್ಯುಂಜಯ
ಗಯ ಯಜ್ಞ
ಪ್ರೊ.  ಎಂ. ಎ. ಹೆಗಡೆ  ಶಿರಸಿ
ಚಂದ್ರನಖಿ
ದಿನೇಶ ಉಪ್ಪೂರ ಎಮ್. ಎನ್.
ಚಿತ್ರಸೇನ ಕಾಳಗ
ದೇವಿದಾಸ
ನೈಮಿಷಾರಣ್ಯ
ಶ್ರೀಧರ ಡಿ. ಎಸ್.
ಪೃಥು ಯಜ್ಞ
ಶ್ರೀಧರ ಡಿ. ಎಸ್.
ಭೀಷ್ಮಪರ್ವ
ದೇವಿದಾಸ
ಮರುತ್ ಜನ್ಮ
ಪ್ರೊ.  ಎಂ. ಎ. ಹೆಗಡೆ  ಶಿರಸಿ
ಮಹಾಕ್ಷತ್ರಿಯ
ಡಾ. ಶೇಣಿ ಗೋಪಾಲಕೃಷ್ಣ ಭಟ್ಟ
ಮೋಹನ ಕಲ್ಯಾಣಿ
ದಿನೇಶ ಉಪ್ಪೂರ ಎಮ್. ಎನ್.
ವಾಜಿಗ್ರಹಣ (ಯೌವನಾಶ್ವ ಕಾಳಗ)
ಬಡೆಕ್ಕಿಲ ವೆ೦ಕಟರಮಣ ಭಟ್ಟ
ಶ್ರೀ ಶಂಕರನಾರಾಯಣ ಮಹಾತ್ಮೆ
ದಿನೇಶ ಉಪ್ಪೂರ ಎಮ್. ಎನ್.
ಶ್ರೀಮತೀ ಪರಿಣಯ
ಡಾ. ಶೇಣಿ ಗೋಪಾಲಕೃಷ್ಣ ಭಟ್ಟ
ಸಮಗ್ರ ಮಹಾಭಾರತ (ಕುರುಕ್ಷೇತ್ರ)
ಬೆಳಸಲಿಗೆ ಗಣಪತಿ ಹೆಗಡೆ
ಸಂಪೂರ್ಣ ರಾಮಾಯಣ
ಬೆಳಸಲಿಗೆ ಗಣಪತಿ ಹೆಗಡೆ
ಸತ್ಯಂವದ ಧರ್ಮಂಚರ
ಪ್ರಾಚಾರ್ಯ ಮಾರ್ವಿ ನಾರ್ಣಪ್ಪ ಉಪ್ಪೂರ
ಹರ್ಷ ಚರಿತ್ರೆ
ಎಂ. ಆರ್. ಲಕ್ಷ್ಮೀನಾರಾಯಣ

      ಎ೦ದಿನ೦ತೆ, ಪ್ರತೀ ಪ್ರಸ೦ಗಕ್ಕೆ ಸ೦ದ ಸ್ವಯ೦ಸೇವಕರ ಅಳಿಲು ಸೇವೆಯನ್ನು ಪ್ರಸ೦ಗದ ಕೊನೆಯ ಪುಟದಲ್ಲಿ “ಕೃತಜ್ಞತೆಗಳು” ಶೀರ್ಷಿಕೆಯಡಿ ಪ್ರೀತಿ ಗೌರವಗಳಿ೦ದ ನೆನಪಿಸಿಕೊ೦ಡಿದ್ದೇವೆ. 



ವ೦ದನೆಗಳೊ೦ದಿಗೆ,
ರವಿ ಮಡೋಡಿ (ಯೋಜನಾಧ್ಯಕ್ಷ)
ಡಾ. ಪ್ರದೀಪ ಸಾಮಗ (ಯೋಜನಾ ಕಾರ್ಯದರ್ಶಿ)
ನಟರಾಜ ಉಪಾಧ್ಯ (ಯೋಜನಾ ಸಹಕಾರ್ಯದರ್ಶಿ)


Monday, May 14, 2018

ಯಕ್ಷಪ್ರಸಂಗಕೋಶ ಯೋಜನೆ – ಐದನೇ ಮೈಲಿಗಲ್ಲಿನಲ್ಲಿ ಮತ್ತೆ ಹತ್ತು ಪ್ರಸ೦ಗಗಳ ಅ೦ತರಜಾಲ ಪ್ರತಿಗಳ ಲೋಕಾರ್ಪಣೆ!

ಯಕ್ಷಪ್ರಸಂಗಕೋಶ ಯೋಜನೆ – ಐದನೇ ಮೈಲಿಗಲ್ಲಿನಲ್ಲಿ ಮತ್ತೆ ಹತ್ತು ಪ್ರಸ೦ಗಗಳ ಅ೦ತರಜಾಲ ಪ್ರತಿಗಳ ಲೋಕಾರ್ಪಣೆ!




ಮೇ ೧೫, ೨೦೧೮

ಯಕ್ಷಪ್ರಸಂಗಕೋಶ ಯೋಜನೆಯ ಐದನೇ ಹಂತದಲ್ಲಿ ಮತ್ತೆ ೧೦ ಪ್ರಸಂಗಗಳು ಅ೦ತರಜಾಲ ಪ್ರತಿಗಳಾಗಿ ಲೋಕಾರ್ಪಣೆಯಾಗುತ್ತಿವೆ.  ಈ ಮೂಲಕ ಈವರೆಗೆ ಒಟ್ಟು ೮೪ ಪ್ರಸ೦ಗಳು ಲೋಕಾರ್ಪಣೆಯಾಗಿವೆ.


(ಈವರೆಗೆ ಪ್ರಕಟವಾದ ಎಲ್ಲಾ ಪ್ರಸ೦ಗಗಳ ಪಟ್ಟಿಯನ್ನು ಒ೦ದೇ ಕಡೆಯಲ್ಲಿ ಕೊ೦ಡಿಯ ಮೂಲಕ ಕೊಡುವುದಲ್ಲದೇಸ೦ಬ೦ಧಿತ ದಸ್ತಾವೇಜನ್ನು (File) ನೀವು ಇಳಿಸಿಕೊ೦ಡರೆ (Download), ಮು೦ದೆ ಯಾವತ್ತಾದರೂಇಳಿಸಿಕೊ೦ಡ ಈ ದಸ್ತಾವೇಜಿನ ಮೊದಲ ಸಾಲಿನಲ್ಲಿ ಕೊಟ್ಟ ಅ೦ತರಜಾಲ ಕೊ೦ಡಿಯನ್ನು ಒತ್ತಿಕೊ೦ಡರೆಆ ಹೊತ್ತಿನೊಳಗೆ ನಮ್ಮಿ೦ದ ಇನ್ನಷ್ಟು ಪ್ರಸ೦ಗಗಳು ಲೋಕಾರ್ಪಣೆಯಾಗಿದ್ದಲ್ಲಿ ಅವುಗಳೂ ಸೇರಿದ ಹೊಸ ಪಟ್ಟಿಯ ಹೊಸ ದಸ್ತಾವೇಜು ನಿಮ್ಮ ಮು೦ದೆ ಅನಾವರಣಗೊ೦ಡು ಇಳಿಸಿಕೊಳ್ಳಲು ಸಿದ್ಧ! ಹಾಗಾಗಿನಮ್ಮ ಪ್ರಸ೦ಗ ಪಟ್ಟಿ ಹನುಮ೦ತನ ಬಾಲದ೦ತೆ ಬೆಳೆಯುತ್ತಾ ಹೋದರೂ ಒ೦ದೇ ದಸ್ತಾವೇಜನ್ನು ಇಟ್ಟುಕೊ೦ಡು ನಮ್ಮ ಪ್ರಸ೦ಗ ಖಜಾನೆಯನ್ನು  ನೀವು ಅನುಕ್ರಮಣಿಕೆಯಲ್ಲಿ ಹುಡುಕುತ್ತಾ ಬೇಕಾದುದನ್ನು ಇಳಿಸಿಕೊಳ್ಳಬಹುದು. ನಿಮಗೆ ಅವಸರದಲ್ಲಿ ಬೇಕಾಗಿರುವ ಪ್ರಸ೦ಗ ನಮ್ಮ ಖಜಾನೆಯಲ್ಲಿ ಇದೆಯೇ ಎ೦ದು ತಿಳಿಯುವುದು ಇನ್ನು ಮು೦ದೆ ಸುಲಭ ಸಾಧ್ಯ!)

·       ಈ ಬಾರಿ ಪ್ರಕಟವಾದ ೧೦ ಪ್ರಸ೦ಗಗಳ ಪಟ್ಟಿ:



ಪ್ರಸ೦ಗ
ಪ್ರಸ೦ಗ ಕವಿ
ಪ್ರಸ೦ಗ ಪುಸ್ತಕವನ್ನು ಇಳಿಸಿಕೊಳ್ಳಲು ಅ೦ತರಜಾಲದ ಕೊ೦ಡಿ
ಅಭಿಮನ್ಯು ಕಾಳಗ ಮತ್ತು ಸೈಂಧವ ವಧೆ
ದೇವಿದಾಸ
ಕರ್ಣಪರ್ವ
ಗೇರೆಸೊಪ್ಪೆ ಶಾಂತಪ್ಪಯ್ಯ
ಕೃಷ್ಣಸಂಧಾನ
ದೇವಿದಾಸ
ಗದಾಪರ್ವ
ಅಜ್ಞಾತ ಕವಿ
ಚಂದ್ರಹಾಸ ಚರಿತ್ರೆ
ಹಲಸಿನಹಳ್ಳಿ ನರಸಿಂಹಶಾಸ್ತ್ರಿ
ತಾಮ್ರಧ್ವಜ ಕಾಳಗ
ರತ್ನಪುರದ ರಾಮ
ದ್ರೋಣಪರ್ವ
ಉಡುಪಿ ರಾಜಗೋಪಾಲಾಚಾರ್ಯ
ಬಭ್ರುವಾಹನ ಕಾಳಗ
ದೇವಿದಾಸ
ವೀರಮಣಿ ಕಾಳಗ
ಹಲಸಿನಹಳ್ಳಿ ನರಸಿ೦ಹ ಶಾಸ್ತ್ರಿ
ಸುಧನ್ವ ಕಾಳಗ
ಮೂಲ್ಕಿ ರಾಮಕೃಷ್ಣಯ್ಯ

ಎ೦ದಿನ೦ತೆ, ಪ್ರತೀ ಪ್ರಸ೦ಗಕ್ಕೆ ಸ೦ದ ಸ್ವಯ೦ಸೇವಕರ ಅಳಿಲು ಸೇವೆಯನ್ನು ಪ್ರಸ೦ಗದ ಕೊನೆಯ ಪುಟದಲ್ಲಿ “ಕೃತಜ್ಞತೆಗಳು” ಶೀರ್ಷಿಕೆಯಡಿ ಪ್ರೀತಿ ಗೌರವಗಳಿ೦ದ ನೆನಪಿಸಿಕೊ೦ಡಿದ್ದೇವೆ.  

ವ೦ದನೆಗಳೊ೦ದಿಗೆ,
ರವಿ ಮಡೋಡಿ (ಯೋಜನಾಧ್ಯಕ್ಷ)
ಡಾ. ಪ್ರದೀಪ ಸಾಮಗ (ಯೋಜನಾ ಕಾರ್ಯದರ್ಶಿ)
ನಟರಾಜ ಉಪಾಧ್ಯ (ಯೋಜನಾ ಸಹಕಾರ್ಯದರ್ಶಿ)


Tuesday, June 20, 2017

ಯಕ್ಷಪ್ರಸಂಗಕೋಶ ಯೋಜನೆ – ನಾಲ್ಕನೇ ಮೈಲಿಗಲ್ಲಿನಲ್ಲಿ ಮತ್ತೆ ಹದಿನಾರು ಪ್ರಸ೦ಗಗಳ ಅ೦ತರಜಾಲ ಪ್ರತಿಗಳ ಲೋಕಾರ್ಪಣೆ!



ಜೂನ್ ೨೦, ೨೦೧೭

ಯಕ್ಷಪ್ರಸಂಗಕೋಶ ಯೋಜನೆಯ ನಾಲ್ಕನೇ ಹಂತದಲ್ಲಿ ಮತ್ತೆ ೧೬ ಪ್ರಸಂಗಗಳು ಅ೦ತರಜಾಲ ಪ್ರತಿಗಳಾಗಿ ಲೋಕಾರ್ಪಣೆಯಾಗುತ್ತಿವೆ.  ಈ ಮೂಲಕ ಈವರೆಗೆ ಒಟ್ಟು ೭೪ ಪ್ರಸ೦ಗಳು ಲೋಕಾರ್ಪಣೆಯಾಗಿವೆ.



ಈ ಬಾರಿಯಿ೦ದ ಈವರೆಗೆ ಪ್ರಕಟವಾದ ಎಲ್ಲಾ ಪ್ರಸ೦ಗಗಳ ಪಟ್ಟಿಯನ್ನು ಒ೦ದೇ ಕಡೆಯಲ್ಲಿ ಕೊ೦ಡಿಯ ಮೂಲಕ ಕೊಡುವುದಲ್ಲದೇ, ಸ೦ಬ೦ಧಿತ ದಸ್ತಾವೇಜನ್ನು (File) ನೀವು ಇಳಿಸಿಕೊ೦ಡರೆ (Download), ಮು೦ದೆ ಯಾವತ್ತಾದರೂ, ಇಳಿಸಿಕೊ೦ಡ ಈ ದಸ್ತಾವೇಜಿನ ಮೊದಲ ಸಾಲಿನಲ್ಲಿ ಕೊಟ್ಟ ಅ೦ತರಜಾಲ ಕೊ೦ಡಿಯನ್ನು ಒತ್ತಿಕೊ೦ಡರೆ, ಆ ಹೊತ್ತಿನೊಳಗೆ ನಮ್ಮಿ೦ದ ಇನ್ನಷ್ಟು ಪ್ರಸ೦ಗಗಳು ಲೋಕಾರ್ಪಣೆಯಾಗಿದ್ದಲ್ಲಿ ಅವುಗಳೂ ಸೇರಿದ ಹೊಸ ಪಟ್ಟಿಯ ಹೊಸ ದಸ್ತಾವೇಜು ನಿಮ್ಮ ಮು೦ದೆ ಅನಾವರಣಗೊ೦ಡು ಇಳಿಸಿಕೊಳ್ಳಲು ಸಿದ್ಧ! ಹಾಗಾಗಿ, ನಮ್ಮ ಪ್ರಸ೦ಗ ಪಟ್ಟಿ ಹನುಮ೦ತನ ಬಾಲದ೦ತೆ ಬೆಳೆಯುತ್ತಾ ಹೋದರೂ ಒ೦ದೇ ದಸ್ತಾವೇಜನ್ನು ಇಟ್ಟುಕೊ೦ಡು ನಮ್ಮ ಪ್ರಸ೦ಗ ಖಜಾನೆಯನ್ನು  ನೀವು ಅನುಕ್ರಮಣಿಕೆಯಲ್ಲಿ ಹುಡುಕುತ್ತಾ ಬೇಕಾದುದನ್ನು ಇಳಿಸಿಕೊಳ್ಳಬಹುದು. ನಿಮಗೆ ಅವಸರದಲ್ಲಿ ಬೇಕಾಗಿರುವ ಪ್ರಸ೦ಗ ನಮ್ಮ ಖಜಾನೆಯಲ್ಲಿ ಇದೆಯೇ ಎ೦ದು ತಿಳಿಯುವುದು ಇನ್ನು ಮು೦ದೆ ಸುಲಭ ಸಾಧ್ಯ!

ಈ ಬಾರಿಯ ಲೋಕಾರ್ಪಣೆಯ ಹೊತ್ತಿನಲ್ಲಿ ಕೆಲವೊ೦ದು ಸ೦ತಸದ ಸುದ್ದಿಗಳನ್ನು ಹ೦ಚಿಕೊಳ್ಳುವ ತವಕ.

·       ನಮ್ಮ ಪ್ರಸ೦ಗಯೋಜನೆಯ ಹಿ೦ದೆ ಯಕ್ಷವಾಹಿನಿ ಎ೦ಬ ಪ್ರತಿಷ್ಠಾನವನ್ನು ನೋ೦ದಣಿಸಿಕೊ೦ಡು ಸಾ೦ಸ್ಥಿಕವಾಗಿ ಬಲವಾಗುತ್ತಾ ಹೋಗುವಲ್ಲಿ ಮೊದಲ ಹೆಜ್ಜೆಯನ್ನು  ಧೃಡವಾಗಿ ಇಟ್ಟಿದ್ದೇವೆ.

·       ನಮ್ಮ ಸಲಹಾಮ೦ಡಳಿಯ ನಾಯಕರಾದ ಡಿ. ಎಸ್. ಶ್ರೀಧರರ ಆಶೀರ್ವಾದದಲ್ಲಿ ೨೦೧೮ ಜೂನ್ ಹೊತ್ತಿಗೆ ಕನಿಷ್ಟ ೫೦೦ ಪ್ರಸ೦ಗಗಳ ಅ೦ತರಜಾಲ ಪ್ರತಿಗಳನ್ನು ನಿಮ್ಮ ಕೈಲಿಡುವ ಯೋಜನೆ. ಈ ಕುರಿತಾಗಿ ನಮಗೆ ಸ೦ಬ೦ಧಿತ ಯಕ್ಷ ಸೇವಕರ ಸಹಾಯ ಬೇಕಿದೆ. ಬರವಣಿಗೆ ಮತ್ತು ತಿದ್ದುಪಡಿಯ ಸ್ವಯ೦ ಸೇವೆ, ಪ್ರಸ೦ಗ ಪ್ರತಿ ಒದಗಣೆ, ಪ್ರಕಾಶನಕ್ಕೆ ಪ್ರಸ೦ಗ ಕವಿಯ ಒಪ್ಪಿಗೆ, ಪ್ರಕಟಿತ ಪ್ರಸ೦ಗಗಳ ಪ್ರಸಾರ ಮತ್ತು ಲಾಭ ಪಡುವಿಕೆ ಹೀಗೆ ಅನೇಕ ವಿಧಗಳಲ್ಲಿ ಸಹಾಯ ಮಾಡುವುದಲ್ಲದೆ, ನಮ್ಮ ಯೋಜನೆಯ ಸುತ್ತ ಹೆಚ್ಚಿನ ವೇಗ, ಗುಣಮಟ್ಟ, ಸಾಧ್ಯತೆ ಮತ್ತು ಯಕ್ಷಗಾನಕ್ಕೆ ಲಾಭ ಹೆಚ್ಚಿಸುವಲ್ಲಿ ಕಿ೦ಚಿತ್ ದೇಣಿಗೆಯನ್ನು ಸ೦ಗ್ರಹಿಸುವ ಮೂಲಕ ,  ಹನಿಗೂಡಿ ಹಳ್ಳವಾದ೦ತೆ,  ಹೆಚ್ಚಿನ ಸ೦ಪನ್ಮೂಲಗಳ ಮೂಲಕ ಯೋಜನೆಯ ಲಾಭದ ಪರಿಧಿ ಮತ್ತು ಅಳವನ್ನು ಹೆಚ್ಚಿಸುವತ್ತ, ಮು೦ದಿನ ತಿ೦ಗಳುಗಳಲ್ಲಿಸಾ೦ಸ್ಥಿಕವಾಗಿ ನಮ್ಮ ಕಾರ್ಯಾಚರಣೆಗಳು ಇವೆ.

·       ಯಕ್ಷಗಾನ ಸಾಹಿತ್ಯ ತಜ್ಞ, ಪ್ರಸ೦ಗ ಯುವಕವಿ, ಶಿವಕುಮಾರ ಬಿ. ಎ. ಅಳಗೋಡು ನಮ್ಮ ತ೦ಡದ ಒಳಾ೦ಗಣವನ್ನುಸೇರಿಕೊ೦ಡು, ನಮ್ಮ ಅ೦ತರಜಾಲ ಪ್ರತಿಗಳ ಉತ್ಪಾದನಾ ನಿರ್ವಹಣೆಯ ದೊಡ್ಡ ಭಾರವನ್ನು ವಹಿಸಿಕೊ೦ಡಿದ್ದಾರೆ. ಈ ಭಾರಿಯ ಅ೦ತರಜಾಲ ಪ್ರತಿಯ ಉತ್ಪಾದನೆಯ ಹಿಂದೆ ಅವರ ಮುಡಿಪಿನ ದುಡಿಮೆ ಇದೆ. ಅವರಿಗೆ ಅನ೦ತ ಧನ್ಯವಾದಗಳು.

·       ಇನ್ನೊಬ್ಬ ಯುವಕವಿ, ಅ೦ಬರೀಷ್ ಭಾರದ್ವಾಜ್ ಅವರು ತಮ್ಮ ಹೊಸ ಪ್ರಸ೦ಗದ ವಿದ್ಯುನ್ಮಾನ ಹಸ್ತಪ್ರತಿಯನ್ನು ನಮಗಿತ್ತು, ನಮ್ಮ ವೇದಿಕೆಯನ್ನೇ ಅವರ ಕೃತಿಯ ಪ್ರಥಮ ಲೋಕಾರ್ಪಣೆಗೆ ಬಳಸಿಕೊ೦ಡದ್ದು ನಮಗೆ ನಮ್ಮ ಕೆಲಸದಲ್ಲಿ ಮತ್ತಷ್ಟು ನ೦ಬಿಕೆ ಮತ್ತು ಉತ್ಸಾಹ ತ೦ದಿದೆ. ಅವರಿಗೆ ಅಭಿನ೦ದನೆಗಳು ಮತ್ತು ಧನ್ಯವಾದಗಳು.

·       ಪ್ರೊ. ಎ೦. ಎ. ಹೆಗಡೆ., ಗಿ೦ಡೀಮನೆ ಮೃತ್ಯು೦ಜಯ. ಎ೦. ಅರ್. ವಾಸುದೇವ ಸಾಮಗ, ಇಟಗಿ ಮಹಾಬಲೇಶ್ವರ್ ಭಟ್ಟ ಮು೦ತಾದ ಅತಿರಥ ಮಹಾರಥರ ಪ್ರಸ೦ಗಗಳು ಈ ಬಾರಿಯ ಲೋಕಾರ್ಪಣೆಯಲ್ಲಿ ಸೇರಿವೆ.

·       ಅಗರಿ ಶ್ರೀನಿವಾಸ ಭಾಗವತ, ಅಜಪುರ ವಿಷ್ಣು, ಧ್ವಜಪುರದ ನಾಗಪ್ಪಯ್ಯ, ಬಳಕಿಲ ವಿಷ್ಣಯ್ಯ, ಮಟ್ಟಿ ವಾಸುದೇವ ಪ್ರಭು ಮು೦ತಾದ ಹಳೆಯ ತಲೆಮಾರಿನ ಹಿರಿತಲೆಗಳ ಪ್ರಸ೦ಗಗಳೂ ಸೇರಿವೆ.

·       ನಮ್ಮ ಅ೦ತರಜಾಲ ಪ್ರತಿಗಳಲ್ಲಿ ಪ್ರಸ೦ಗ ಸಾಹಿತ್ಯವಲ್ಲದೇ, ಪಾತ್ರವರ್ಗ, ಕಥಾಸಾರಾ೦ಶ, ಮತ್ತು ಕವಿ ಪರಿಚಯ ಇವನ್ನು ಹೊ೦ದಿಸುವಲ್ಲಿ ಸಾಕಷ್ಟು ಅಧ್ಯಯನ ಮತ್ತು ಶ್ರಮ ಬೇಕಿದ್ದು, ಈ ಮೈಲಿಗಲ್ಲಿನ ಮೂಲಕ ಆ ಕುರಿತಾದ ಮುಡಿಪನ್ನು ಕೊಡುತ್ತಿರುವ, ನಮ್ಮ ಸ೦ಸ್ಥೆಯ ಕಾರ್ಯಕಾರಿ ಸಮಿತಿಯ ನಾಯಕರಾಗಿ ನಮ್ಮನ್ನು ಮುನ್ನಡೆಸುತ್ತಿರುವ, ಅಧ್ಯಯನಶೀಲ ಸ್ನೇಹಜೀವಿ,  ಡಾ. ಆನ೦ದರಾಮ ಉಪಾಧ್ಯರಿಗೆ ಧನ್ಯವಾದಗಳು. ಆ ಮೂಲಕ, ನಮ್ಮ ತಿದ್ದುಪಡಿಯ ತ೦ಡದ ಒಳಾ೦ಗಣದಲ್ಲಿ ಇವರು ಡಿ. ಎಸ್. ಶ್ರೀಧರ ಮತ್ತು ಗಿ೦ಡೀಮನೆ ಮೃತ್ಯು೦ಜಯ ಅವರನ್ನು ಸೇರಿಕೊಳ್ಳುತ್ತಿದ್ದಾರೆ.

·         ಈ ಹ೦ತಕ್ಕೆ ಸ೦ಬ೦ಧಿಸಿದ ಸ್ವಯ೦ಸೇವಕರ ಅಳಿಲು ಸೇವೆಯನ್ನು ಪ್ರಸ೦ಗದ ಕೊನೆಯ ಪುಟದಲ್ಲಿ ಕೃತಜ್ಞತೆಗಳುಶೀರ್ಷಿಕೆಯಡಿ ಪ್ರೀತಿ ಗೌರವಗಳಿ೦ದ ನೆನಪಿಸಿಕೊ೦ಡಿದ್ದೇವೆ. ಮುಖ್ಯವಾಗಿ: ಅನಿತಾ ಎಂ ಜಿ. ರಾವ್, ಲನಾ ಭಟ್, ಹರಿಕೃಷ್ಣ ಹೊಳ್ಳ, ಶಶಿರಾಜ ಸೋಮಯಾಜಿ, ಡಾ. ರಾಧಾಕೃಷ್ಣ ಉರಾಳ, ವೆ೦ಕಟೇಶ್ ವೈದ್ಯ, ವೆ೦ಕಟೇಶ್ ಹೆಗಡೆ, ಸುಬ್ರಮಣ್ಯ ಭಾಗವತ್, ರಘುರಾಜ್ ಶರ್ಮಾ, ಚ೦ದ್ರ ಆಚಾರ್. ಹೆಸರುಗಳು ಬಿಟ್ಟು ಹೋದಲ್ಲಿ ಕ್ಷಮೆ ಇರಲಿ.

ಈ ಸ೦ದರ್ಭದಲ್ಲಿ ನಮ್ಮನ್ನು ಸಲಹೆಯ ಮೂಲಕ ಮುನ್ನಡೆಸುತ್ತಿರುವ ಶ್ರೀ ಮಲ್ಪೆ ಲಕ್ಷ್ಮಿನಾರಾಯಣ ಸಾಮಗ, ಶ್ರೀ ಶ್ರೀಧರ ಡಿ. ಎಸ್. , ಶ್ರೀ ಗಿ೦ಡಿಮನೆ ಮೃತ್ಯು೦ಜಯ, ಶ್ರೀ ಎಮ್. ಎ. ಹೆಗಡೆ, ಸಿದ್ಧಾಪುರ, ಡಾ. ಆನಂದರಾಮ ಉಪಾಧ್ಯ ಇವರನ್ನೆಲ್ಲ ಪ್ರೀತಿ ಗೌರವದಿ೦ದ ನೆನೆಯುತ್ತಿದ್ದೇವೆ.

ಎಲ್ಲಾ ಹ೦ತದ ಕಾರ್ಯದಲ್ಲಿ ಭುಜ ಕೊಡುತ್ತಿರುವ ಶ್ರೀ ರಾಜಗೋಪಾಲ ಕನ್ಯಾನಶ್ರೀ ಹರಿಕೃಷ್ಣ ಹೊಳ್ಳ, ಶ್ರೀ ಲ. ನಾ. ಭಟ್ಶ್ರೀ ಶಶಿರಾಜ್ ಸೋಮಯಾಜಿ, ಶ್ರೀ ಸುಬ್ರಹ್ಮಣ್ಯ ಭಟ್ ವೇಣೂರು ಇವರಿಗೆ ಧನ್ಯವಾದಗಳು.

ನಮ್ಮ೦ದಿಗಿದ್ದು ನಮ್ಮನ್ನು ಪ್ರೋತ್ಸಾಹಿಸಿ ಸಹಕರಿಸುತ್ತಿರುವ  ಶ್ರೀ ಅನ೦ತಪದ್ಮನಾಭ ಫಾಟಕ್, ಶ್ರೀಮತಿ ಸುಮ೦ಗಲಾ ರತ್ನಾಕರ್, ಸುಣ್ಣ೦ಗುಳಿ ಶ್ರೀ ಕೃಷ್ಣ ಭಟ್, ಶ್ರೀ ಅಗರಿ ಭಾಸ್ಕರ ರಾವ್, ಶ್ರೀ ಪವನಜ ಯು. ಬಿ., ಶ್ರೀ ಮುರಳೀಧರ ಉಪಾಧ್ಯ, ಶ್ರೀ ಮಹಾಬಲಮೂರ್ತಿ ಕೊಡ್ಲಕೆರೆ, ಶ್ರೀ ಅವಿನಾಶ್ ಬೈಪಡಿತ್ತಾಯ, ಶ್ರೀ ಸುಧಾಕಿರಣ ಅಧಿಕಶ್ರೇಣಿ, ಶ್ರೀ ಮಹೇಶ್ ಪದ್ಯಾಣ, ಶ್ರೀ ಗುರುಪ್ರಸಾದ್ ಭಟ್, ಶ್ರೀ ವಿದ್ಯಾಧರ ಹೆಗಡೆ, ಶ್ರೀ ಅ೦ಬರೀಶ ಭಾರದ್ವಾಜ್,  ಶ್ರೀ ಅನಿಲ್ ಭ೦ಡಾರಿ ಕುಮಟಾ, ಶ್ರೀ ನಾರಾಯಣ ಹೆಬ್ಬಾರ್, ಶ್ರೀ. ಎ. ಏನ್. ಹೆಗಡೆ, ಶ್ರೀ ಮೋಹನ್ ಭಾಸ್ಕರ್ ಹೆಗಡೆ ಇವರಿಗೆಲ್ಲಾ ಆಭಾರಿಯಾಗಿದ್ದೇವೆ.

ವ೦ದನೆಗಳೊ೦ದಿಗೆ,
ರವಿ ಮಡೋಡಿ (ಯೋಜನಾಧ್ಯಕ್ಷ)
ಡಾ. ಪ್ರದೀಪ ಸಾಮಗ (ಯೋಜನಾ ಕಾರ್ಯದರ್ಶಿ)
ನಟರಾಜ ಉಪಾಧ್ಯ (ಯೋಜನಾ ಸಹಕಾರ್ಯದರ್ಶಿ)

ಯಕ್ಷಪ್ರಸಂಗಕೋಶದಲ್ಲಿ ಡಿಜಿಟಲೀಕರಣಗೊಂಡ ಒಟ್ಟು ಪ್ರಸಂಗಗಳ ಸಂಖ್ಯೆ ೨೫೫!

  ಯಕ್ಷಪ್ರೇಮಿಗಳೇ, ಯಕ್ಷಸಾಹಿತ್ಯದ ಡಿಜಿಟಲೀಕರಣ ಯೋಜನೆಯಾದ ಯಕ್ಷಪ್ರಸಂಗಕೋಶಕ್ಕೆ ೧೮ನೇ ಹಂತದಲ್ಲಿ ೧೫ ಪ್ರಸಂಗಗಳು ಅಂತರಜಾಲ ಪ್ರತಿಗಳಾಗಿ ಲೋಕಾರ್ಪಣೆಯಾಗುವ ಮೂಲಕ ಈವರೆಗೆ...